ADVERTISEMENT

ಗಿಣಿಕಲ್‌: ಕಾಡಾನೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:30 IST
Last Updated 2 ಜೂನ್ 2025, 15:30 IST
ತೀರ್ಥಹಳ್ಳಿ ತಾಲ್ಲೂಕಿನ ಬೀಸು ಗ್ರಾಮದಲ್ಲಿ ಕಾಣಿಸಿಕೊಂಡ ಆನೆ
ತೀರ್ಥಹಳ್ಳಿ ತಾಲ್ಲೂಕಿನ ಬೀಸು ಗ್ರಾಮದಲ್ಲಿ ಕಾಣಿಸಿಕೊಂಡ ಆನೆ   

ತೀರ್ಥಹಳ್ಳಿ: ತೆಂಗಿನಕೊಪ್ಪ, ಕವಲೇದುರ್ಗಾ, ಟೆಂಕಬೈಲು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದ ಒಂಟಿ ಕಾಡಾನೆ, ಮಧ್ಯಾಹ್ನ ಹೊಸನಗರ ತಾಲ್ಲೂಕಿನ ಸುಳುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಣಿಕಲ್‌ನಲ್ಲಿ ಕಾಣಿಸಿಕೊಂಡಿದೆ.

ಕಾಡಾನೆಯ ಚಲನವಲನದ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಗಿಣಿಕಲ್‌ ಸಮೀಪ ಮೂಕಾಂಬಿಕಾ, ಸೋಮೇಶ್ವರ ವನ್ಯಜೀವಿ ವಿಭಾಗವಿದ್ದು, ವರಾಹಿ ಹಿನ್ನೀರು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಆ ಭಾಗಕ್ಕೆ ಕಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ತೀರ್ಥಹಳ್ಳಿ ಸುತ್ತಮುತ್ತ ಯಾವುದೇ ರೀತಿಯ ಕಾಡಾನೆ ದಾಳಿ ನಡೆಸಿಲ್ಲ. ಆರಗದಲ್ಲಿ ಒಂದು ಅಡಿಕೆ ಮರವನ್ನು ಉರುಳಿಸಿರುವುದನ್ನು ಹೊರತುಪಡಿಸಿ ಮತ್ಯಾವುದೇ ಹಾನಿ ಪ್ರಕರಣ ನಡೆದಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.