ADVERTISEMENT

ತೀರ್ಥಹಳ್ಳಿ| ಮತ್ತೆ ಬಂತು ನಾಯಿಯನ್ನು ಹೊತ್ತೊಯ್ದಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 6:44 IST
Last Updated 17 ಸೆಪ್ಟೆಂಬರ್ 2019, 6:44 IST
   

ತೀರ್ಥಹಳ್ಳಿ: ತಾಲ್ಲೂಕಿನ ಬಸವಾನಿ ಸಮೀಪ ಹೊಳೆಕೊಪ್ಪ ರಘುನಾಥ್ ಅವರ ಮನೆಯ ಕಾಂಪೌಂಡ್‌ ಮೇಲೇರಿ ಒಳಬಂದು ಸಾಕುನಾಯಿಯನ್ನು ಹೊತ್ತೊಯ್ದಿದ್ದ ಚಿರತೆಮರು ದಿನ ಮತ್ತೆ ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಶುಕ್ರವಾರ ಮಧ್ಯರಾತ್ರಿ ರಘುನಾಥ್‌ ಅವರ ಮನೆಗೆ ಬಂದಿದ್ದ ಚಿರತೆ ಅವರ ಮನೆಯಲ್ಲಿದ್ದ ಎರಡು ಸಾಕುನಾಯಿಗಳ ಪೈಕಿ ಡ್ಯಾಶ್‌ಹೌಂಡ್‌ ನಾಯಿಯನ್ನು ಕಚ್ಚಿಕೊಂಡು ಹೋಗಿತ್ತು.5 ಅಡಿ ಎತ್ತರದ ಕಾಂಪೌಂಡ್‌ ಹಾರಿ ಚಿರತೆ ಒಳಬಂದು ನಾಯಿಯನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಅವರ ಮನೆಯಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ಘಟನೆ ನಡೆದ ಮರು ದಿನ ಸಮೀಪದ ಮನೆಯೊಂದರ ಬಳಿ ಮತ್ತೆ ಚಿರತೆಯ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ.

ADVERTISEMENT

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು ಚಿರತೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಆಗುಂಬೆಯಲ್ಲಿ ಒಂಟಿ ಕಾಡಾನೆ ಆಗಾಗ ಕಾಣಿಸಿಕೊಳ್ಳುತ್ತಿದ್ದು ಆನೆ ಸ್ಥಳಾಂತರಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಅರಣ್ಯ ಇಲಾಖೆ ಇದುವರೆಗೂ ಸ್ಥಳಾಂತರ ಮಾಡಿಲ್ಲ.

‘ನಾಯಿ ಕಚ್ಚಿಕೊಂಡು ಹೋದ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದೇನೆ. ಬೋನು ಇಟ್ಟು ಹಿಡಿಯುವುದಾಗಿ ತಿಳಿಸಿದ್ದಾರೆ. ಶಾಲೆಗೆ ಹೋಗುವ ಮಕ್ಕಳು ಭಯದಿಂದಲೇ ಓಡಾಡುವಂತಾಗಿದೆ’ ಎನ್ನುತ್ತಾರೆ ಹೊಳೆಕೊಪ್ಪದ ರಘುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.