ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಮಳೆಗೆ ಶಿವಮೊಗ್ಗ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ.
ಕಳೆದ ನಾಲ್ಕೈದು ದಿನದಿಂದ ಜಿಲ್ಲೆಯಲ್ಲಿ ಅಕಾಲಿಕ ಮಳೆಮುಂದುವರಿದಿದೆ. ಬುಧವಾರ ರಾತ್ರಿ ಸುರಿದ ಬಾರಿ ಮಳೆಗೆ ನಗರದ ಹಲವಡೆ ಚರಂಡಿ ನಿರು ಮನೆಯೊಳಗೆ ನುಗ್ಗಿದೆ. ಜನರು ನಿದ್ರೆ ಬಿಟ್ಟು ನೀರು ಹೊರಗೆ ಹಾಕುತ್ತ ರಾತ್ರಿ ಕಳೆದಿದ್ದಾರೆ. ಹೊಸಮನೆ ಬಡಾವಣೆಯ ಹಲವು ಮನೆಗಳು ಜಲಾವೃತಗೊಂಡಿವೆ.
ಗೃಹಪಯೋಗಿ ವಸ್ತುಗಳು ನೀರಿನಿಂದಾಗಿ ಹಾಳಾಗಿವೆ. ಸ್ಥಳಕ್ಕೆ ಪಾಲಿಕೆಸದಸ್ಯೆ ರೇಖಾ ರಂಗನಾಥರ್ ಭೇಟಿ ನೀಡಿದ್ದರು. ಸ್ಮಾರ್ಟ್ ಸಿಟಿ ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾರಣ ಚರಂಡಿಯಲ್ಲಿ ನೀರು ಹರಿಯದೇ ಮನೆಗಳಿಗೆ ನುಗ್ಗಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ವಿವಿಧೆಡೆ ಬಾರಿ ಮಳೆ:ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದೆ. ಹೊಸನಗರ, ತೀರ್ಥಹಳ್ಳಿಯ ಹಲವು ಕಡೆ ಭಾರಿ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಭತ್ತದ ಬೆಳೆ, ಅಡಿಕೆಗೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.