ADVERTISEMENT

ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ನಿವೇಶನ: ನೌಕರರ ಸಂಘದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 4:57 IST
Last Updated 7 ಸೆಪ್ಟೆಂಬರ್ 2025, 4:57 IST
<div class="paragraphs"><p>ಪೊಲೀಸ್ – ಪ್ರಾತಿನಿಧಿಕ ಚಿತ್ರ</p></div>

ಪೊಲೀಸ್ – ಪ್ರಾತಿನಿಧಿಕ ಚಿತ್ರ

   

ಶಿವಮೊಗ್ಗ: ಸರ್ಕಾರಿ ನೌಕರರ, ಸರ್ಕಾರಿ ಹಾಗೂ ಖಾಸಗಿ ನೌಕರರ ಸಂಘಟನೆ, ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ನೌಕರರ ಸಂಘಗಳ ಹೆಸರಲ್ಲಿ ಬೆಂಗಳೂರಿನ ದೇವನಹಳ್ಳಿ ಬಳಿ ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ಹೇಳಿ ಶಿವಮೊಗ್ಗದ ಮುಖ್ಯ ರಸ್ತೆಗಳು, ಬೇರೆ ಬೇರೆ ಗಲ್ಲಿಗಳಲ್ಲಿ ಕೆಲ ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಭಿತ್ತಿಪತ್ರಗಳು (ಪೋಸ್ಟರ್) ಕಾಣಸಿಗುತ್ತಿವೆ. 

ನಿವೇಶನ ಬೇಕಾದವರು ಸಂಪರ್ಕಿಸಲು, ಸಂಪರ್ಕಕ್ಕೆ ಮೊಬೈಲ್ ಫೋನ್ ನಂಬರ್ ಗಳ ಹಾಕಲಾಗಿದೆ. ಅತ್ಯಂತ ಕಡಿಮೆ ಬೆಲೆಗೆ ನಿವೇಶನ ಲಭ್ಯವಿದೆ. ಕೆಲವೇ ನಿವೇಶನಗಳು ಉಳಿದಿವೆ. ಕೂಡಲೇ ಬುಕ್ಕಿಂಗ್ ಮಾಡಿ. ಆಕರ್ಷಕ ಕೊಡುಗೆಗಳು ಲಭ್ಯವಿದೆ ಎಂದು ಅದರಲ್ಲಿ ಹೇಳಲಾಗಿದೆ.

ADVERTISEMENT

ಈ ಜಾಹೀರಾತುಗಳು ಹಾಗೂ ಮಾಹಿತಿ ಫಲಕಗಳು ಸಾರ್ವಜನಿಕರಲ್ಲಿ ಅದರಲ್ಲೂ ಸರ್ಕಾರಿ ನೌಕರರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

'ನಿವೇಶನಗಳನ್ನು ನೌಕರರ ಸಂಘ, ಗೃಹ ನಿರ್ಮಾಣ ಸಂಘಗಳಿಂದ ಅಭಿವೃದ್ಧಿಪಡಿಸಲಾಗಿದೆಯೇ, ಹಾಗಿದ್ದರೆ ಸಂಘಟನೆಯಿಂದಲೇ ಮಾಹಿತಿ ಕೊಡಲಾಗುತ್ತಿತ್ತು. ಪೋಸ್ಟರ್ ಗಳಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಕೇಳಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ. ಬೆಂಗಳೂರಿಗೆ ಬನ್ನಿ ಸೈಟ್ ಕೊಡುತ್ತೇವೆ ಎಂದು ಹೇಳುತ್ತಾರೆ. ಇದು ವಿಶ್ವಾಸಾರ್ಹವೇ' ಎಂದು ವಿನೋಬ ನಗರದ ಪೊಲೀಸ್ ಚೌಕಿ ಬಳಿಯ ನಿವಾಸಿ ನಿವೃತ್ತ ಶಿಕ್ಷಕ ಮಂಜುನಾಥಗೌಡ ಪ್ರಶ್ನಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.