ADVERTISEMENT

ಮಳೆ ಬಿಡುವು: ತಗ್ಗಿದ ಜಲಾಶಯಗಳ ಒಳಹರಿವು

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 22:45 IST
Last Updated 22 ಜೂನ್ 2021, 22:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಜಿಲ್ಲೆಯಲ್ಲಿ ಮೂರು ದಿನದಿಂದ ಮಳೆ ಕ್ಷೀಣಿಸಿದ್ದು, ಜಲಾಶಯಗಳ ಒಳಹರಿವು ಪ್ರಮಾಣವೂ ತಗ್ಗಿದೆ. ತುಂಗಾ ಜಲಾಶಯದ ಒಳಹರಿವು 15,414 ಕ್ಯುಸೆಕ್‍ಗೆ ಇಳಿಕೆಯಾಗಿದೆ.

ಜಲಾಶಯ ಈಗಾಗಲೇ ಭರ್ತಿ ಆಗಿರುವುದರಿಂದ, ಒಳ ಹರಿವಿನ ಪ್ರಮಾಣದಷ್ಟೇ ನೀರನ್ನು ಹೊಳೆಗೆ ಬಿಡಲಾಗುತ್ತಿದೆ. ‌ಭದ್ರಾ ಜಲಾಶಯಕ್ಕೆ ಪ್ರಸ್ತುತ 9,581 ಕ್ಯುಸೆಕ್ ಒಳಹರಿವು ಇದೆ. ಹಾಗಾಗಿ, ಜಲಾಶಯದ ನೀರಿನ ಮಟ್ಟ 152.6 ಅಡಿಗೆ ಏರಿಕೆಯಾಗಿದೆ.

ಲಿಂಗನಮಕ್ಕಿ ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಸಂಪೂರ್ಣ ತಗ್ಗಿದೆ. ಜಲಾಶಯಕ್ಕೆ 10,827 ಕ್ಯುಸೆಕ್ ಒಳಹರಿವು ಇದೆ. ಇದರಿಂದ ಡ್ಯಾಂನ ನೀರಿನ ಮಟ್ಟ 1785.70 ಅಡಿಗೆ ತಲುಪಿದೆ. ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರ ತಗ್ಗಿದ್ದು, ಕೆಲವೆಡೆ ಮಂಗಳವಾರ ಸಾಧಾರಣ ಮಳೆ ಸುರಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.