ADVERTISEMENT

ಹೊಸನಗರ: ಪ್ರಕಾಶ್ ಟ್ರಾವೆಲ್ಸ್‌ ಮಾಲೀಕ ಶವವಾಗಿ ಪತ್ತೆ

ಪಟಗುಪ್ಪ ಸೇತುವೆಯ ಹಿನ್ನೀರಿನಲ್ಲಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 4:47 IST
Last Updated 25 ಜನವರಿ 2022, 4:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸನಗರ: ಶುಕ್ರವಾರ ಕಾಣೆಯಾಗಿದ್ದ ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರ ಮೃತದೇಹ ಇಂದು ತಾಲ್ಲೂಕಿನ ಪಟಗುಪ್ಪ ಸೇತುವೆಯ ಹಿನ್ನೀರಿನಲ್ಲಿ ಪತ್ತೆಯಾಗಿದೆ.

ಮೃತದೇಹವನ್ನು ಶವ ಪರೀಕ್ಷೆಗೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕಳುಹಿಸಲಾಗಿದೆ. ಶವಪರೀಕ್ಷೆ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಪ್ರಕಾಶ್ ಅವರು ಕಾಣದಿದ್ದಾಗ ಮನೆಯವರು ಆತಂಕಗೊಂಡು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಬಳಿಕ ಅವರ ಮೊಬೈಲ್ ಲೊಕೇಶನ್ ಪತ್ತೆ ಹಚ್ಚಿದಾಗ ಅದು ಪಟಗುಪ್ಪ ಸೇತುವೆ ಬಳಿ ತೋರಿಸಿತ್ತು.ಅಲ್ಲಿ ಶೋಧ ನಡೆಸಿದಾಗ ಅವರ ಕಾರು ಹಾಗೂ ಮೊಬೈಲ್ ಪಟಗುಪ್ಪ ಸೇತುವೆಯ ಬಳಿಪತ್ತೆಯಾಗಿತ್ತು.

ADVERTISEMENT

ಹೊಸನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ನಿರಂತರ ಶೋಧ ಕಾರ್ಯ ನಡೆಸಿದ್ದರು. ಸೋಮವಾರ ಮುಂಜಾನೆ ಅವರ ಮೃತದೇಹ ಪಟಗುಪ್ಪ ಸೇತುವೆ ಹಿನ್ನೀರಿನಲ್ಲಿ ಪತ್ತೆಯಾಗಿದೆ.

ತನಿಖೆಗೆ ಒತ್ತಾಯ: ‘ಪ್ರಕಾಶ್ ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಸೇತುವೆಯ ಬಳಿ ಅವರನ್ನು ಬರುವಂತೆ ಮಾಡಿ ನಂತರ ಇಲ್ಲಿ ಕೊಲೆ ಮಾಡಿರಬಹುದು’ ಎಂದುಅವರ ಕುಟುಂಬಸ್ಥರು ಹಾಗೂ ಆಪ್ತರು ಅನುಮಾನವ್ಯಕ್ತಪಡಿಸಿದ್ದಾರೆ.

ಶೀಘ್ರ ಈ ಬಗ್ಗೆ ತನಿಖೆ ನಡೆಸಿ ಅವರ ಸಾವಿಗೆ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.