ADVERTISEMENT

ಶಿವಮೊಗ್ಗ: ಕೊರಳಿಗೆ ಈರುಳ್ಳಿ ಹಾರ ಧರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 11:37 IST
Last Updated 10 ಜನವರಿ 2020, 11:37 IST
ಶಿವಮೊಗ್ಗದಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಅಧ್ಯಕ್ಷೆ ಅನಿತಾ ಕುಮಾರಿ ನೇತೃತ್ವದಲ್ಲಿಗುರುವಾರಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕೊರಳಿಗೆ ಈರುಳ್ಳಿ ಹಾರ ಧರಿಸಿ, ರಸ್ತೆಯಲ್ಲಿ ರಂಗೋಲಿ ಹಾಕಿದರು.ರಸ್ತೆಯಲ್ಲೇ ಅಡುಗೆ ಮಾಡಿ, ಪಾತ್ರೆಗಳನ್ನು ಬಡಿಯುವ ಮೂಲಕ ಕೇಂದ್ರಸರ್ಕಾರದವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಪರಿಣಾಮ ಬಡವರ ಬದುಕುದುಸ್ತರವಾಗಿದೆ. ದಿನಬಳಕೆಯ ದಿನಸಿ ಸಾಮಗ್ರಿಗಳಾದ ಬೇಳೆ ಕಾಳು, ಅಡುಗೆ ಸಿಲಿಂಡರ್, ಪೆಟ್ರೋಲ್ ಮತ್ತಿತರ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕೇಂದ್ರಸರ್ಕಾರನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು.

ADVERTISEMENT

ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ ಧರ್ಮಗಳಮಧ್ಯೆಕಿತ್ತಾಟ, ಅನಗತ್ಯ ಹೇಳಿಕೆಗಳು, ಕೋಮುವಾದ ಪ್ರಚೋದಿಸುವ ಕೆಲಸಗಳಲ್ಲಿ ತೊಡಗಿದೆ. ರಾಜ್ಯದಲ್ಲೂ ಬಿಜೆಪಿಸರ್ಕಾರವಿದೆ. ಆದರೂ ಸೂಕ್ತ ನೆರೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಸರ್ಕಾರದತಪ್ಪುನಿರ್ಧಾರಗಳಿಂದ ಜನಜೀವನ ಕಷ್ಟವಾಗುತ್ತಿದೆ. ಉದ್ಯೋಗಗಳುನಾಶವಾಗಿವೆ.ಆರ್ಥಿಕತೆ ಕುಸಿದಿದೆ. ಆಹಾರ ಸಾಮಾಗ್ರಿಗಳ ಬೆಲೆ ಏರುತ್ತಲೇ ಇದೆ. ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಈಗಾಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ವೇತಾ ಬಂಡಿ,ಪಕ್ಷದ ಮುಖಂಡರಾದ ಸುವರ್ಣಾನಾಗರಾಜ್, ರೂಪಾ ನಾರಾಯಣ, ರೇಷ್ಮಾ, ಫಾಮಿದಾ ಬೇಗಂ, ಕವಿತಾ, ಮಂಜುಳಾ, ರಂಗಮ್ಮ, ನಿರ್ಮಲಾ, ಪುಷ್ಪಲತಾಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.