ADVERTISEMENT

ಸಾಗರ | ಬೆಳೆ ನಾಶ: ಹಾಲಪ್ಪ ಹರತಾಳು ಖಂಡನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:10 IST
Last Updated 25 ಜುಲೈ 2025, 4:10 IST
ಹಿರಳೆ ಗ್ರಾಮದಲ್ಲಿ ತಿಮ್ಮಪ್ಪ ಎಂಬುವವರ ಕೃಷಿ ಭೂಮಿಯಲ್ಲಿನ ಬೆಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಾಶ ಪಡಿಸಿದ್ದು, ಗುರುವಾರ ಸ್ಥಳಕ್ಕೆ ಎಚ್. ಹಾಲಪ್ಪ ಹರತಾಳು ಭೇಟಿ ನೀಡಿ ಪರಿಶೀಲಿಸಿದರು
ಹಿರಳೆ ಗ್ರಾಮದಲ್ಲಿ ತಿಮ್ಮಪ್ಪ ಎಂಬುವವರ ಕೃಷಿ ಭೂಮಿಯಲ್ಲಿನ ಬೆಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಾಶ ಪಡಿಸಿದ್ದು, ಗುರುವಾರ ಸ್ಥಳಕ್ಕೆ ಎಚ್. ಹಾಲಪ್ಪ ಹರತಾಳು ಭೇಟಿ ನೀಡಿ ಪರಿಶೀಲಿಸಿದರು   

ಸಾಗರ: ತಾಲ್ಲೂಕಿನ ಹಿರಳೆ ಗ್ರಾಮದಲ್ಲಿ ತಿಮ್ಮಪ್ಪ ಎಂಬುವವರ ಕೃಷಿಭೂಮಿಯಲ್ಲಿನ ಬೆಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಾಶ ಪಡಿಸಿರುವ ಘಟನೆಯನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಚ್. ಹಾಲಪ್ಪ ಹರತಾಳು ಖಂಡಿಸಿದ್ದಾರೆ.

ಗುರುವಾರ ಸ್ಥಳಕ್ಕೆ ಭೇಟಿ ನೀಡಿ ನೊಂದ ರೈತರಿಗೆ ಸಾಂತ್ವಾನ ಹೇಳಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾತನಾಡಿದರು.

‘ತಿಮ್ಮಪ್ಪ ಅವರು ಬೆಳೆದಿರುವ ಶುಂಠಿ ಬೆಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಾಶ ಪಡಿಸಿರುವ ಕ್ರಮ ಅಮಾನವೀಯವಾಗಿದೆ. ಅವರು ತಮ್ಮ ಕೃಷಿಭೂಮಿಯ ಸಕ್ರಮೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿ ಇನ್ನೂ ವಿಲೇ ಆಗಬೇಕಿದೆ. ಹೀಗಿರುವಾಗ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮ ದೌರ್ಜನ್ಯವಲ್ಲದೆ ಮತ್ತೇನೂ ಅಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

‘ಮಲೆನಾಡಿನಲ್ಲಿ ಕಂದಾಯ– ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಅನೇಕ ಗಂಭೀರ ಸಮಸ್ಯೆಗಳಿವೆ. ಈ ಎರಡೂ ಇಲಾಖೆಗಳು ಸೇರಿ ಜಂಟಿ ಸರ್ವೆ ನಡೆಸಬೇಕು ಎಂಬ ಬೇಡಿಕೆ ದೀರ್ಘಕಾಲದಿಂದ ಬಾಕಿ ಇದೆ. ಇಂತಹ ಅಗತ್ಯ ಕೆಲಸ ಮಾಡುವ ಬದಲು ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಹರೀಶ್ ಮೂಡಳ್ಳಿ, ಈಶ್ವರ ಮಡಸೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.