ADVERTISEMENT

ಶಿವಮೊಗ್ಗ | ಫೇಸ್‌ಬುಕ್ ಜಾಹೀರಾತು ನಂಬಿ ₹61 ಲಕ್ಷ ಕಳೆದುಕೊಂಡ ವ್ಯಕ್ತಿ

-

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:57 IST
Last Updated 5 ಫೆಬ್ರುವರಿ 2026, 2:57 IST
₹ 3 ಲಕ್ಷ ಕಳೆದುಕೊಂಡ ಮಹಿಳೆ
₹ 3 ಲಕ್ಷ ಕಳೆದುಕೊಂಡ ಮಹಿಳೆ   

ಶಿವಮೊಗ್ಗ: ನಗರದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಕಂಡ ಆಕರ್ಷಕ ಜಾಹೀರಾತು ನಂಬಿ ಚಿನ್ನದ ಮೇಲೆ ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಹೆಸರಿನಲ್ಲಿ ₹61 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ಪ್ರಕಟವಾದ ‘LF Work’ ಕಂಪನಿಯ ಜಾಹೀರಾತಿನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಜಾಹೀರಾತಿನ ಲಿಂಕ್ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಸಿಕೊಂಡ ಸಂತ್ರಸ್ತರನ್ನು ನಂತರ ವಾಟ್ಸ್‌ಆ್ಯಪ್ ಗುಂಪಿಗೆ ಸೇರಿಸಿ ಹಣ ಹೂಡಿಕೆ ಮಾಡಿಸಲಾಗಿದೆ.

ಯುಪಿಐ ಐಡಿ ಡಿಲೀಟ್: ಹಂತ ಹಂತವಾಗಿ ವಿವಿಧ ಯುಪಿಐ ಐಡಿಗಳಿಗೆ ಹಣ ವರ್ಗಾಯಿಸುವಂತೆ ಹೇಳಲಾಗಿದ್ದು, ಹಣ ಪಾವತಿಸಿದ ತಕ್ಷಣವೇ ಆ ಯುಪಿಐ ಐಡಿಗಳನ್ನು ಡಿಲೀಟ್ ಮಾಡಲಾಗಿದೆ. ಈ ರೀತಿ ಒಟ್ಟು ₹61,00,000 ಮೊತ್ತವನ್ನು ವಂಚಕರು ಪಡೆದುಕೊಂಡಿದ್ದಾರೆ.

ADVERTISEMENT

ಲಾಭಾಂಶ ಸಿಗದೆ, ಮೂಲ ಹಣವೂ ವಾಪಸ್ ಬರದಾದಾಗ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ವ್ಯಕ್ತಿ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.