
ಭದ್ರಾವತಿ : ನಗರದ ಮಿಲ್ಟ್ರಿ ಕ್ಯಾಂಪ್ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಅದ್ದೂರಿಯಾಗಿ ಜರುಗಿದ 41ನೇ ವರ್ಷದ ಗಿಡದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವೆಂಕಟಾಚಲ ಮಹೋತ್ಸವದ ಸಂದರ್ಭದಲ್ಲಿ ಚಿಕ್ಕ ತಿರುಪತಿ ಎಂದೇ ಹೆಸರಾಗಿರುವ ನಾಗಮಂಗಲ ತಾಲ್ಲೂಕಿನ ದೇವಲಾಪುರ ಹೋಬಳಿ ನಾಗನಕೆರೆಯಲ್ಲಿ ಜರಗುವ ಈ ಜಾತ್ರೆಯನ್ನು ಇಲ್ಲಿನ ದಾಸರ ಸಮಿತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ನೆಲೆಸಿರುವ ದಾಸಪ್ಪ ಮತ್ತು ಜೋಗಪ್ಪ ಹಾಗು ವೆಂಕಟೇಶ್ವರ ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಬೆಳಿಗ್ಗೆ 11 ಗಂಟೆಯಿಂದ ಧಾರ್ಮಿಕ ಆಚರಣೆಗಳು ಆರಂಭಗೊಂಡಿದ್ದು, ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಬಿ. ರಾಮದಾಸಯ್ಯ, ಡಿ. ವರದರಾಜು, ಎಸ್. ರಜತ್, ಜಿ. ಪುಷ್ಪರಾಜ್ ಮತ್ತು ಬಿ.ಎಸ್ ಸುನೀಲ್ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದರು. ಮಧ್ಯಾಹ್ನ ಪ್ರಸಾದ ವಿತರಣೆ ಹಾಗು ಅನ್ನಸಂತರ್ಪಣೆ ನಡೆಯಿತು. ಈ ನಡುವೆ ಸಮಿತಿಯಿಂದ ಮಹೋತ್ಸವದಲ್ಲಿ ಪಾಲ್ಗೊಂಡ ದಾನಿಗಳು, ಸೇವಾಕರ್ತರು ಹಾಗು ಗಣ್ಯರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಸಮಿತಿ ಪ್ರಮುಖರಾದ ಗೌರವಾಧ್ಯಕ್ಷ ಎಂ. ವೆಂಕಟೇಶ್, ಅಧ್ಯಕ್ಷ ಎನ್.ಸಿ ಗಿರೀಶ್, ಉಪಾಧ್ಯಕ್ಷ ನಿಂಗರಾಜು, ಪ್ರಧಾನ ಕಾರ್ಯದರ್ಶಿ ಆರ್. ನಾಗರಾಜ್, ಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್, ಸಹಕಾರ್ಯದರ್ಶಿ ಎನ್.ಸಿ ಯೋಗೇಶ್, ಖಜಾಂಚಿ ಕಾಂತರಾಜ್, ಸಂಚಾಲಕ ತಿಮ್ಮಯ್ಯ, ಗುರುನಂಜಯ್ಯ, ಡಿ. ಯಾಲಕ್ಕಯ್ಯ, ಎಸ್. ನಾಗರಾಜ್, ಸುರೇಶ್, ಸೋಮಶೇಖರ್ ( ಪಟೇಲ್ ) , ಭೀಮಯ್ಯ, ಎಚ್.ಕೆ ಕರಿಯಪ್ಪ, ಜಯಲಕ್ಷ್ಮೀ ಸಿದ್ದರಾಜು, ಶ್ರೀನಿವಾಸ, ಜಾನಕಮ್ಮ, ಎಸ್. ವರದಯ್ಯ, ಹರೀಶ್, ಎಂ.ವಿ ಧರ್ಮರಾಜ್, ನೇತ್ರಾವತಿ ಕೃಷ್ಣಮೂರ್ತಿ, ಎಂ.ಎಸ್ ಸುರೇಶ್, ಎಂ. ಸುಚಿತ್ರ ಗೋಪಾಲ್, ಎನ್. ಹೇಮಂತ್, ಪ್ರೇಕ್ಷಿತ್, ವೆಂಕಟೇಶ್, ನವೀನ್ ಕುಮಾರ್, ಸಂದೀಪ್, ತಿಮ್ಮಯ್ಯ ಮತ್ತು ರಾಮಚಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.