ADVERTISEMENT

ಜ.14 ರಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 19:23 IST
Last Updated 8 ಜನವರಿ 2025, 19:23 IST
ಸಿಗಂದೂರು ಚೌಡಮ್ಮ ದೇವಿ
ಸಿಗಂದೂರು ಚೌಡಮ್ಮ ದೇವಿ   

ತುಮರಿ (ಶಿವಮೊಗ್ಗ ಜಿಲ್ಲೆ): ನಾಡಿನ ಪ್ರಸಿದ್ಧ ಶಕ್ತಿದೇವತೆ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಜನವರಿ 14 ಮತ್ತು 15ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ.

ಜ.14ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವಕ್ಕೆ ಸಾರಗನ ಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ ಸ್ವಾಮೀಜಿ ಸಾನಿಧ್ಯದಲ್ಲಿ  ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಲಿದ್ದಾರೆ ಎಂದು ಆನುವಂಶಿಕ ಧರ್ಮಾಧಿಕಾರಿ ಎಸ್.ರಾಮಪ್ಪ ಮಾಹಿತಿ ನೀಡಿದ್ದಾರೆ.

ಅಂದು ಪ್ರಾತಃಕಾಲ 4 ಗಂಟೆಗೆ ಮಹಾಭಿಷೇಕ, ಅಲಂಕಾರ ಪೂಜೆ, ಗೋಪೂಜೆ, ಗುರುಪೂಜೆ, ಬೆಳಿಗ್ಗೆ 8ರಿಂದ ಚಂಡಿಕಾ ಹವನ, ದೇವಿ ಮೂಲ ಸ್ಥಾನದಲ್ಲಿ ನವ ಚಂಡಿಕಾ ಹವನ ನಂತರ ಬೆಳಿಗ್ಗೆ 9 ರಿಂದ ಮೂಲ ಸ್ಥಾನದಿಂದ ಧರ್ಮಾಧಿಕಾರಿ ನೇತೃತ್ವದ ಪಲ್ಲಕ್ಕಿ ಉತ್ಸವ, ಜ್ಯೋತಿ ಮೆರವಣಿಗೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ. ಚಾಲನೆ ನೀಡಲಿದ್ದಾರೆ. ಅದೇ ದಿನ ವಿಶೇಷ ಆಹ್ವಾನಿತರಾಗಿ ಚಿಕ್ಕಬಳ್ಳಾಪುರದ ಪೋಲಿಸ್ ಉಪಾಧೀಕ್ಷಕ ವೀರೇಂದ್ರ ಕುಮಾರ್ ಪಿ. ಭಾಗವಹಿಸಲಿದ್ದಾರೆ. ಜಾತ್ರೆಯ ಪ್ರಯುಕ್ತ ಸಿಗಂದೂರು ಮೇಳದಿಂದ ‘ರಾಗ ಚಂದ್ರಿಕೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ADVERTISEMENT

ಜ.15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ರಾತ್ರಿ ದುರ್ಗಾದೀಪ ಪೂಜೆ, ರಂಗಪೂಜೆ, 8.30ರಿಂದ ಶಮಿತಾ ಮಲ್ನಾಡ್ ತಂಡದಿಂದ ‘ಸ್ವರ ಸಿಂಗಾರ‘ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.