ADVERTISEMENT

ಮನೆಯಲ್ಲೇ ತಯಾರಿಸಿದ್ದ ಏಳು ನಾಡ ಬಂದೂಕು ವಶ; ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 19:26 IST
Last Updated 5 ಫೆಬ್ರುವರಿ 2026, 19:26 IST
ಶಿಕಾರಿಪುರ ಪಟ್ಟಣ ಸಮೀಪದ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿಯನ್ನು ಏಳು ಬಂದೂಕು ಸಮೇತ ಬುಧವಾರ ಪೊಲೀಸರು ಬಂಧಿಸಿದ್ದಾರೆ
ಶಿಕಾರಿಪುರ ಪಟ್ಟಣ ಸಮೀಪದ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿಯನ್ನು ಏಳು ಬಂದೂಕು ಸಮೇತ ಬುಧವಾರ ಪೊಲೀಸರು ಬಂಧಿಸಿದ್ದಾರೆ   

ಶಿಕಾರಿಪುರ: ನಾಡ ಬಂದೂಕು ತಯಾರಿಸಿ ಮಾರಾಟಕ್ಕಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಸಮೀಪದ ಭದ್ರಾಪುರ ಗ್ರಾಮದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. 

ಲಕ್ಷ್ಮಣಪ್ಪ (67) ಬಂಧಿತ ಆರೋಪಿ. ಬಡಗಿ ವೃತ್ತಿ ಮಾಡುವ ಅವರು ಮನೆಯಲ್ಲಿ ನಾಡ ಬಂದೂಕು ತಯಾರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದಾಗ ಸಿದ್ಧವಾಗಿರುವ 7ಬಂದೂಕು, ಮರದಲ್ಲಿ ಸಿದ್ಧಪಡಿಸುತ್ತಿರುವ ಮೂರು ಆಕೃತಿ, ಕಬ್ಬಿಣದ ನಳಿಕೆ ಸೇರಿ ಹಲವು ಪರಿಕರ ವಶಕ್ಕೆ ಪಡೆದಿದ್ದಾರೆ.

ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ 2019ರ ಅನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿವೈಎಸ್‌ಪಿ ಕೆ.ಇ. ಕೇಶವ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿಎಸ್‌ಐ ಎಚ್.ಶರತ್, ಸಿಬ್ಬಂದಿಯಾದ ಕೊಟ್ರೇಶಪ್ಪ, ಕೆ.ಪ್ರದೀಪ್, ನಾಗರಾಜ, ರವಿ ನಾಯ್ಕ, ರವಿಕುಮಾರ್ ಪಾಲ್ಗೊಂಡಿದ್ದರು. 

ADVERTISEMENT
ಶಿಕಾರಿಪುರ ಪಟ್ಟಣ ಸಮೀಪದ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿಯನ್ನು ಏಳು ಬಂದೂಕು ಸಮೇತ ಬುಧವಾರ ಪೊಲೀಸರು ವಶಕ್ಕೆ ಬಂಧಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.