ADVERTISEMENT

ರೈಲು ಟಿಕೆಟ್ ಬುಕಿಂಗ್‌ ಆ್ಯಪ್ ಸೌಲಭ್ಯ ಈಗ ಕನ್ನಡದಲ್ಲಿ

ಪ್ರಯಾಣಿಕರ ಸ್ನೇಹಿ ನಡೆಯತ್ತ ನೈರುತ್ಯ ರೈಲ್ವೆ

ವೆಂಕಟೇಶ್ ಜಿ.ಎಚ್
Published 20 ಜನವರಿ 2023, 11:06 IST
Last Updated 20 ಜನವರಿ 2023, 11:06 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಶಿವಮೊಗ್ಗ: ರೈಲು ಟಿಕೆಟ್ ಪಡೆಯಲು ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಕನ್ನಡದಲ್ಲೇ ಯುಟಿಎಸ್‌ (ಅನ್ ರಿಸರ್ವ್‌ಡ್ ಟಿಕೆಟಿಂಗ್ ಸಿಸ್ಟಮ್) ಮೊಬೈಲ್ ಆ್ಯಪ್ ಸೇವೆಯನ್ನು ನೈರುತ್ಯ ರೈಲ್ವೆ ಪರಿಚಯಿಸಿದೆ.

ಪ್ರಯಾಣಿಕರು ರೈಲು ಟಿಕೆಟ್ ಪಡೆಯಲು ಈ ಮೊದಲು ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಅದನ್ನು ತಪ್ಪಿಸಲೆಂದೇ ಇಲಾಖೆಯು ಇದುವರೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿದ್ದ ಯುಟಿಎಸ್‌ ಆ್ಯಪ್‌ನ ಬಳಕೆಗೆ ಅವಕಾಶ ಕಲ್ಪಿಸಿತ್ತು. ಇದೀಗ ಕನ್ನಡದಲ್ಲಿಯೇ ಯುಟಿಎಸ್‌
ಮೊಬೈಲ್ ಆ್ಯಪ್ ಮೂಲಕ ಪ್ರಯಾಣದ ಟಿಕೆಟ್ (ಕಾಯ್ದಿರಿಸದ ಟಿಕೆಟ್‌) ಪಡೆಯುವ ಅವಕಾಶವನ್ನು ಕಲ್ಪಿಸಿದೆ.

ಪ್ರಯಾಣಿಕರು ತಾವು ಇರುವ ಸ್ಥಳದಿಂದ 20 ಕಿ.ಮೀ ವ್ಯಾಪ್ತಿಯಲ್ಲಿರುವ ಯಾವುದೇ ನಿಲ್ದಾಣದಿಂದ ಹೊರಡಲು ಯುಟಿಎಸ್‌ ಆ್ಯಪ್‌ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆದುಕೊಳ್ಳಬಹುದು.

ADVERTISEMENT

ಯುಟಿಎಸ್‌ ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಯಾಣದ ಸಾಮಾನ್ಯ ಬುಕಿಂಗ್‌ ಟಿಕೆಟ್, ತ್ವರಿತ ಬುಕಿಂಗ್‌ ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್, ಸೀಜನ್ ಟಿಕೆಟ್ ಬುಕಿಂಗ್, ಕ್ಯು-ಆರ್ ಬುಕಿಂಗ್ ಸೌಲಭ್ಯದ ಜೊತೆಗೆ ಟಿಕೆಟ್ ರದ್ದತಿ, ಟಿಕೆಟ್‌ನ ಸದ್ಯದ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿಯನ್ನೂ ಪಡೆಯಬಹುದು.

ಈ ಆ್ಯಪ್‌ ಅನ್ನು ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗೆ ಗೂಗಲ್ ಪ್ಲೇಸ್ಟೋರ್, ವಿಂಡೋಸ್ ಸ್ಟೋರ್ ಹಾಗೂ ಐಫೋನ್ ಬಳಕೆದಾರರು ಆಪಲ್ ಸ್ಟೋರ್ ಮೂಲಕ ಡೌನಲೋಡ್ ಮಾಡಿಕೊಳ್ಳಬಹುದು. ಲಿಂಕ್: https://play.google.com/store/apps/details?id=com.cris.utsmobile.

...............

ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸದ್ಯ 6.5 ಲಕ್ಷ ಜನರು ಯುಟಿಎಸ್‌ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಪ್ರಯಾಣಿಕರು ಈಗ ಕನ್ನಡದಲ್ಲಿಯೇ ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಲಿ.

-ಅನೀಶ್ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈರುತ್ಯ ರೈಲ್ವೆ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.