ADVERTISEMENT

ಮನುಷ್ಯನ ಕಲ್ಯಾಣವೇ ಸೇವೆಯ ಅಂತಿಮ ಗುರಿ: ಲೇಖಕ ಎನ್.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:43 IST
Last Updated 14 ಮೇ 2025, 15:43 IST
ಕೋಣಂದೂರು ಸೀನಿಯರ್ ಚೇಂಬರ್ ಪದಗ್ರಹಣ ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜಯೇಶ್ ಪದಗ್ರಹಣ ನೆರವೇರಿಸಿದರು
ಕೋಣಂದೂರು ಸೀನಿಯರ್ ಚೇಂಬರ್ ಪದಗ್ರಹಣ ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜಯೇಶ್ ಪದಗ್ರಹಣ ನೆರವೇರಿಸಿದರು   

ಕೋಣಂದೂರು: ‘ಜಗತ್ತಿಗೆ ಕರುಣೆ, ಮೈತ್ರಿಯಿಂದ ಕೂಡಿದ ಮಾನವೀಯ ಸಮಾಜ ನಿರ್ಮಾಣ ಮಾಡುವಲ್ಲಿ ಸೀನಿಯರ್ ಛೇಂಬರ್‌ನಂತಹ ಸಾಮಾಜಿಕ ಸಂಘಟನೆಗಳ ಪಾತ್ರ ಹಿರಿದು’ ಎಂದು ಲೇಖಕ ಎನ್.ರವಿಕುಮಾರ್ ಹೇಳಿದರು.

ಮಂಗಳವಾರ ನಡೆದ ಕೋಣಂದೂರು ಸೀನಿಯರ್ ಛೇಂಬರ್ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಎಲ್ಲ ಜೀವಿಗಳೊಂದಿಗೆ ಕರುಣೆ ಮತ್ತು ಮೈತ್ರಿಯಿಂದ ಬದುಕಿದಾಗ ಮನುಷ್ಯ ಮತ್ತು ಮನುಷ್ಯತ್ವಕ್ಕೆ ಅರ್ಥ ಬರುತ್ತದೆ. ಸನ್ನಡತೆ, ಸದ್ವಿಚಾರ, ಸತ್ಕಾರ್ಯಗಳಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ವಿಚಾರವಿದ್ದ ಮಾತ್ರಕ್ಕೆ ಮನುಷ್ಯ ಪರಿಪೂರ್ಣನಾಗಲಾರ. ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮತ್ತು ಅದನ್ನು ಪ್ರಚಾರದ ಮೂಲಕ ಎಲ್ಲರಿಗೂ ಹಂಚುವ ಕೆಲಸ ಆಗಬೇಕು’ ಎಂದು ಹೇಳಿದರು.

ADVERTISEMENT

‘ದೇವರು ಎಂದರೆ ಒಳ್ಳೆಯದು ಎಂದರ್ಥ. ಕಷ್ಟದಲ್ಲಿರುವವರಿಗೆ ಒಳಿತು ಬಯಸಬೇಕು. ಜನರಿಗೆ ಒಳಿತು ಮಾಡುವ ಕೆಲಸ ಕೇವಲ ಸರ್ಕಾರಗಳದ್ದು ಎಂದು ಭಾವಿಸದೆ ತಮ್ಮ ತಮ್ಮ ಹೊಣೆಗಾರಿಕೆಯನ್ನು ತೋರಬೇಕು. ಸಂವಿಧಾನದ ಪ್ರಸ್ತಾವನೆಯಲ್ಲಿ ‘ಭಾರತದ ಪ್ರಜೆಗಳಾದ ನಾವು…’ ಎಂಬ ಘೋಷಣೆಯೊಂದಿಗೆ ಜನರ ಅಸ್ತಿತ್ವ ಮತ್ತು ಜವಾಬ್ದಾರಿಯನ್ನು ಎತ್ತಿ ಹಿಡಿಯಲಾಗಿದೆ’ ಎಂದರು.

ಸೀನಿಯರ್ ಛೇಂಬರ್‌ನ ರಾಷ್ಟ್ರೀಯ ಅಧ್ಯಕ್ಷ ಎಂ.ಆರ್. ಜಯೇಶ್, ಉಪಾಧ್ಯಕ್ಷೆ ಸುರೇಖಾ ಮುರಳೀಧರ, ಸೀನಿಯರ್ ಛೇಂಬರ್‌ನ ಸೂರ್ಯನಾರಾಯಣ, ಟಿ.ಎನ್.ಜಗದೀಶ್, ಅಧ್ಯಕ್ಷ ಡಿ.ಪಿ.ವಿಶ್ವನಾಥ್, ನೂತನ ಅಧ್ಯಕ್ಷ ಕೆ.ಎಂ.ಲಕ್ಷ್ಮಣ್, ನಾಗಭೂಷಣ, ಕೆ.ಎಲ್.ಮುರಿಗೆಪ್ಪ, ಕುಮಾರ್, ಕೆ.ಬಿ.ಪ್ರಕಾಶ್, ಚಂದ್ರಶೇಖರ್, ಮುರುಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.