ತೀರ್ಥಹಳ್ಳಿ: ತಾಲ್ಲೂಕಿನಲ್ಲಿ ಮಳೆ, ಗಾಳಿಯ ಅಬ್ಬರ ಮುಂದುವರೆದಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ತುಂಗಾ ನದಿಯ ಭೋರ್ಗರೆತಕ್ಕೆ ಇಲ್ಲಿನ ರಾಮಮಂಟಪ ಭಾನುವಾರ ಬಹುತೇಕ ಮುಚ್ಚಿದ ಸ್ಥಿತಿಗೆ ತಲುಪಿದ್ದು, ತಲೆಯಭಾಗ ನೀರಿನ ನಡುವೆ ಆಗೊಮ್ಮೆ ಈಗೊಮ್ಮೆ ಗೋಚರಿಸಿತು.
ಸಾರ್ವಜನಿಕರು ಪ್ರವಾಹದ ತೀವ್ರತೆಯನ್ನು ನೋಡಲು ನದಿಯ ದಂಡೆಗೆ ಆಗಮಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು. ಮಧ್ಯಾಹ್ನದ ನಂತರ ಬಿಸಿಲಿನ ವಾತಾವರಣ ಕಾಣಿಸಿತು.
ಆಗುಂಬೆಯಲ್ಲಿ 22 ಸೆಂ.ಮೀ. ಮಳೆ ದಾಖಲಾಗಿದ್ದು, ನಾಬಳ ಸೇತುವೆ ಮೇಲೆ ನೀರು ಹರಿದು ಗುಡ್ಡೇಕೇರಿ, ಹೊಸಗದ್ದೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೊನ್ನೇತ್ತಾಳು ಗ್ರಾಮದಲ್ಲಿ ಶಶಿಕಲಾ ಎಂಬುವರ ಕೊಟ್ಟಿಗೆಗೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.