ADVERTISEMENT

ನಾಳೆ ‘ಅನಾಥರ ಮಾಯಿ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 12:11 IST
Last Updated 9 ಜನವರಿ 2020, 12:11 IST

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಜ.11ರ ಸಂಜೆ 6.30ಕ್ಕೆ ‘ಅನಾಥರ ಮಾಯಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಸಹ್ಯಾದ್ರಿ ರಂಗತರಂಗ ತಂಡ, ಕಡೆ ಕೊಪ್ಪಲ ಪ್ರತಿಷ್ಠಾನದ ಸಹಯೋಗದಲ್ಲಿ ಸಿಂಧು ತಾಯಿ ಸಪಕಾಳ ಅವರ ಜೀವನ ಚರಿತ್ರೆ ಆಧಾರಿತ ಈ ನಾಟಕ ಪ್ರದರ್ಶನ ಆಯೋಜಿಸಿವೆ ಎಂದು ರಂಗತರಂಗ ತಂಡದ ಗೌರವಾಧ್ಯಕ್ಷ ಕಾಂತೇಶ್ ಕದರಮಂಡಲಗಿಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಪಕಾಳ ಅವರ ಜೀವನಚಿತ್ರಣವನ್ನು ರಂಗರೂಪಕ್ಕೆ ತಂದವರು ಧಾರವಾಡ ರಂಗಾಯಣದ ಮಾಜಿ ನಿರ್ದೇಶಕ ಹುಬ್ಬಳ್ಳಿಯ ಸುಭಾಷ್ ನರೇಂದ್ರ,ಹುಬ್ಬಳ್ಳಿಯ ಸುನಿಧಿ ಕಲಾ ಸೌರಭದ ತಂಡ ಈ ನಾಟಕವನ್ನು ಪ್ರದರ್ಶಿಸುವರು.ಪೋಷಕ ಸದಸ್ಯರ ಹೊರತುಪಡಿಸಿ ಉಳಿದ ಪ್ರೇಕ್ಷರಿಗೆ ₨ 50 ಪ್ರವೇಶ ಶುಲ್ಕನಿಗದಿ ಮಾಡಲಾಗಿದೆ ಎಂದರು.

ADVERTISEMENT

ರಂಗಾಯಣ ಶಿವಮೊಗ್ಗ ನಿರ್ದೇಶಕಸಂದೇಶ್ ಜವಳಿ ಪ್ರದರ್ಶನ ಉದ್ಘಾಟಿಸುವರು. ಭದ್ರಾವತಿಯ ಸಮಾಜಿಕ ಕಾರ್ಯಕರ್ತ ಸವಿತಾ ಸಂಪತ್, ಸುಭಾಷ್ ನರೇಂದ್ರ, ಕಡೆ ಕೊಪ್ಪಲ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಲ್.ರಾವ್ ಉಪಸ್ಥಿತರಿರುವರು. ಸಹ್ಯಾದ್ರಿ ರಂಗ ತರಂಗದ ಅಧ್ಯಕ್ಷ ಬಿ.ಆರ್.ಚಂದ್ರಯ್ಯ ಅಧ್ಯಕ್ಷತೆ ವಹಿಸುವರು ಎಂದು ವಿವರ ನೀಡಿದರು.

ರಂಗಾಯಣ ಮೈಸೂರು, ಸಹ್ಯಾದ್ರಿ ರಂಗತರಂಗಸಹಯೋಗದಲ್ಲಿಜ.12 ಮತ್ತು 13ರಂದು ಪ್ರತಿದಿನ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.12ರಂದು ಕೇರಳದ ಚಂದ್ರದಾಸನ್ ನಿರ್ದೇಶನದ ಅರ್ಕೇಡಿಯಾದಲ್ಲಿ ಪಕ್, 13ರಂದು ಚಿದಂಬರರಾವ್ ಜಂಬೆ ನಿರ್ದೇಶನದ ಬೆಂದಕಾಳು ಆನ್ ಟೋಸ್ಟ್ ಹಾಗೂ ಶ್ರವಣಕುಮಾರ್ ಹೆಗ್ಗೋಡು ನಿರ್ದೇಶನದರೆಕ್ಸ್ ಅವರ್ಸ್-ಡೈನೋ ಏಕಾಂಗಿ ಪಯಣ ನಾಟಕ ಪ್ರದರ್ಶನವಿದೆ.ಈ 3 ನಾಟಕಗಳನ್ನೂ ಮೈಸೂರುರಂಗಾಯಣ ತಂಡ ಪ್ರದರ್ಶಿಸಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿ.ಆರ್.ಚಂದ್ರಯ್ಯ, ಬಿ.ವಿ.ತಿಪ್ಪಣ್ಣ, ಕೆ.ಎಲ್.ರಾವ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.