ಆನವಟ್ಟಿ: ಎರಡು ವರ್ಷ ಮೂರು ತಿಂಗಳ ಎಂ.ಜಿ. ಕಿಯಾನ್ಶ ತನ್ನ ಜ್ಞಾಪನ ಶಕ್ತಿಯಿಂದಾಗಿ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದು, ಐಬಿಆರ್ ಸಾಧನೆಯ ಮಗುವಾಗಿ ಗುರುತಿಸಿಕೊಂಡಿದೆ.
ಮುಗುವಿನ ಸಾಧನೆ: 6 ನರ್ಸರಿ ರೈಮ್ಸ್‌ಗಳನ್ನು ಇಂಗ್ಲಿಷ್ ಮತ್ತು ತೆಲುಗು ಭಾಷೆಯಲ್ಲಿ ಹೇಳುತ್ತಾಳೆ. ಜೊತೆಗೆ 7 ಆಕೃತಿಗಳು, 13 ವಾಹನಗಳು, 9 ಪ್ರಾಣಿಗಳು, 9 ಬಣ್ಣಗಳು, 22 ಇತರೆ ವಸ್ತುಗಳು, ದೇಹದ 15 ಅಂಗಾಂಗಗಳು, 5 ರಾಷ್ಟ್ರೀಯ ಚಿಹ್ನೆಗಳನ್ನು ಸ್ಪಷ್ಟವಾಗಿ ಗುರುತಿಸುವ ಮೂಲಕ ವಿಶೇಷ ಸಾಧನೆ ಮಾಡಿರುವ ಕಿಯಾನ್ಶ ಎಂ.ವಿ.ಗುರುರಾಜ್ ಶೆಟ್ಟಿ, ಎಂ.ಜಿ. ಸತ್ಯಶ್ರೀ ದಂಪತಿಯ ಪುತ್ರಿ.
ಮಗು 22 ತಿಂಗಳು ಇರುವಾಗಲೇ ಮನೆಯಲ್ಲಿ ಹೇಳಿಕೊಡುವ ರೈಮ್ಸ್‌ಗಳನ್ನು ಗುನುಗುತ್ತಿತ್ತು. ಕೇಳಿದನ್ನು ಆಲಿಸಿ ನೆನಪು ಇಟ್ಟುಕೊಳ್ಳುವ ಜ್ಞಾಪನಾ ಶಕ್ತಿ ಮಗುವಿಗೆ ಇದೆ ಎಂದು ಮಗುವಿನ ಪೋಷಕರು ಸಂಸತ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.