ADVERTISEMENT

ತ್ಯಾವರೆಕೊಪ್ಪದ ಸಫಾರಿ ಹುಲಿ ‘ರಾಮ’ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:20 IST
Last Updated 13 ಮೇ 2022, 2:20 IST
‘ರಾಮ’ ಹುಲಿ
‘ರಾಮ’ ಹುಲಿ   

ಶಿವಮೊಗ್ಗ: ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದ ತ್ಯಾವರೆಕೊಪ್ಪದ ಸಫಾರಿಯ ಹಿರಿಯ ಹುಲಿ ‘ರಾಮ’ (17) ಮೃತಪಟ್ಟಿದೆ.

ಹಿರಿಯ ಹುಲಿ ‘ವಾಲಿ’ (18) ಅನಾರೋಗ್ಯದಿಂದ ಈ ಹಿಂದೆ ಸಾವನ್ನಪ್ಪಿತ್ತು. ಹಿರಿಯ ಹುಲಿಗಳು ಸಾವು ಕಂಡಿರುವುದು ಸಫಾರಿ ಸಿಬ್ಬಂದಿಯಲ್ಲಿ ಬೇಸರ ಮೂಡಿಸಿದೆ.

ಉಳಿದಿದ್ದು ಐದು ಮಾತ್ರ: ಸಫಾರಿಯಲ್ಲಿ 6 ಹುಲಿಗಳಿದ್ದವು. ಈಗ ಐದು ಮಾತ್ರ ಉಳಿದುಕೊಂಡಿವೆ. ಇದರಲ್ಲಿ ಸಫಾರಿಯ ಹಿರಿಯ ಹುಲಿ ಎನ್ನಿಸಿಕೊಂಡಿರುವ ‘ಹನುಮ’ (19), ‘ಸೀತಾ’ (16), ‘ವಿಜಯ’ ಮತ್ತು ‘ದಶಮಿ’ (15), ‘ಪೂರ್ಣಿಮ’ (10) ಎಂದು ಸಫಾರಿಯ ಕಾರ್ಯ ನಿರ್ವಾಹಕ ನಿರ್ದೇಶಕ ಮುಕುಂದ್‌ಚಂದ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.