ADVERTISEMENT

ಕೇಂದ್ರ, ರಾಜ್ಯದ ಸೌಲಭ್ಯ ಸದ್ಬಳಕೆ: ರೈತರಿಗೆ ಬಿವೈಆರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 16:09 IST
Last Updated 8 ಫೆಬ್ರುವರಿ 2025, 16:09 IST
ಶಿಕಾರಿಪುರದಲ್ಲಿ ಶನಿವಾರ ವೀರಶೈವ ಸಹಕಾರಿ ಸಂಘದ ಗೋದಾಮು ನಿರ್ಮಾಣಕ್ಕೆ ಸಂಸದ ಬಿ.ವೈ.ರಾಘವೇಂದ್ರ ಗುದ್ದಲಿಪೂಜೆ ನೆರವೇರಿಸಿದರು.
ಶಿಕಾರಿಪುರದಲ್ಲಿ ಶನಿವಾರ ವೀರಶೈವ ಸಹಕಾರಿ ಸಂಘದ ಗೋದಾಮು ನಿರ್ಮಾಣಕ್ಕೆ ಸಂಸದ ಬಿ.ವೈ.ರಾಘವೇಂದ್ರ ಗುದ್ದಲಿಪೂಜೆ ನೆರವೇರಿಸಿದರು.   

ಶಿಕಾರಿಪುರ: ರೈತರಿಗೆ ರಾಜ್ಯ, ಕೇಂದ್ರ ಸರ್ಕಾರ ನೀಡುವ ಸೌಲಭ್ಯ ಸದ್ಭಳಕೆ ಮಾಡಿಕೊಂಡು ರೈತರು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.

ಪಟ್ಟಣದ ವೀರಶೈವ ಸಹಕಾರಿ ಸಂಘದ ಉಗ್ರಾಣ ನಿರ್ಮಾಣಕ್ಕೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ₹2 ಲಕ್ಷ ಕೋಟಿ ಹಣ ರೈತರು ಬಳಸುವ ರಸಗೊಬ್ಬರಕ್ಕೆ ಸಬ್ಸಿಡಿ ಹಣ ನೀಡುತ್ತದೆ. ರಾಜ್ಯದಲ್ಲಿ ಶೂನ್ಯ ಬಡ್ಡಿದರಕ್ಕೆ ಬೆಳೆಸಾಲ ನೀಡಲಾಗುತ್ತಿದೆ. ಜಮೀನು ಖರೀದಿ, ಬೇಲಿ ನಿರ್ಮಾಣ, ಇಂಗು ಗುಂಡಿ, ಹನಿ, ತುಂತುರು ನೀರಾವರಿಗೆ ಸಹಾಯಧನ ಹೀಗೆ ಹಲವು ಸೌಲಭ್ಯ ರೈತರ ಅಭ್ಯುದಯಕ್ಕೆ ನೀಡುತ್ತಿದೆ ಎಂದರು.

ADVERTISEMENT

ನಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಇದೇ ಸಂಘದ ನಿರ್ದೇಶಕರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರು ಮುಖ್ಯಮಂತ್ರಿ ಆಗಿದ್ದಾಗ ತಾಲ್ಲೂಕಿನ ವಿವಿಧ ಸಹಕಾರ ಸಂಘಗಳ ಗೋದಾಮು ನಿರ್ಮಾಣಕ್ಕೆ ₹4.5 ಕೋಟಿ ಅನುದಾನ ನೀಡಿದ್ದನ್ನು ಸ್ಮರಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಪಿ.ಚಂದ್ರಶೇಖರಗೌಡ ಮಾತನಾಡಿದರು. ಸಂಘದ ಅಧ್ಯಕ್ಷ ಕೆ.ಜಿ.ಸುರೇಂದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಡಿ.ಎಲ್.ಬಸವರಾಜ್, ಎಚ್.ಎಸ್.ರವೀಂದ್ರ, ಮಾಜಿ ನಿರ್ದೇಶಕ ಬಿ.ಡಿ.ಭೂಕಾಂತ್, ಸಂಘದ ಉಪಾಧ್ಯಕ್ಷ ಸತೀಶ್, ನಿರ್ದೇಶಕರಾದ ಎಚ್.ಬಿ.ದೇವರಾಜ್, ಎಸ್.ವಿ.ಮಹೇಂದ್ರ, ಎಸ್.ಎಚ್.ನಿರಂಜನ, ವಿಜಯಕುಮಾರ್, ಜಿ.ಬಿ.ಕೋಮಲ ಪಾಟೀಲ್, ಕೆ.ಹನುಮಂತಪ್ಪ, ಎಸ್.ಸುರೇಶ, ಪಿ.ಪಾರ್ವತಮ್ಮ, ಪ್ರಶಾಂತ ಮಾದಪ್ಪರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಗುರುಶಾಂತಯ್ಯ, ರುದ್ರಮುನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.