ADVERTISEMENT

ವೆಂಕಟರಮಣ ಸ್ವಾಮಿ ರಥೋತ್ಸವ: 35 ವರ್ಷಗಳ ನಂತರ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 6:10 IST
Last Updated 12 ಏಪ್ರಿಲ್ 2022, 6:10 IST
ಹೊಸನಗರ ತಾಲ್ಲೂಕಿನ ನಗರ ಗುಜರಿಪೇಟೆ ವೆಂಕಟರಮಣ ದೇಗುಲದ ರಥೋತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು
ಹೊಸನಗರ ತಾಲ್ಲೂಕಿನ ನಗರ ಗುಜರಿಪೇಟೆ ವೆಂಕಟರಮಣ ದೇಗುಲದ ರಥೋತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು   

ಹೊಸನಗರ: 35 ವರ್ಷಗಳಿಂದ ನಿಂತು ಹೋಗಿದ್ದ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿದನೂರು ನಗರದ ಗುಜರಿಪೇಟೆ ವೆಂಕಟರಮಣ ದೇವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆಯಿಂದಲೇ ದೇಗುಲದಲ್ಲಿ ರಥೋತ್ಸವ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ, ವಿವಿಧ ಅಭಿಷೇಕ, ಪಲ್ಲಕ್ಕಿ ಉತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಗೌಡಸಾರಸ್ವತ ಬ್ರಾಹ್ಮಣ ಸಮುದಾಯದ ಪುರೋಹಿತ ಹೊಸಂಗಡಿ ಪ್ರಮೋದ್ ಭಟ್ ನೇತೃತ್ವದಲ್ಲಿ ಶ್ರೀದೇವರ ಮನ್ಮಹಾರಥೋತ್ಸವವನ್ನು ನೆರವೇರಿಸಲಾಯಿತು. ನಿಂತು ಹೋಗಿದ್ದ ರಥೋತ್ಸವವಕ್ಕೆ ಮತ್ತೆ ಚಾಲನೆ ಸಿಕ್ಕಿದ್ದರಿಂದ ಸಂತಸಗೊಂಡ ಭಕ್ತಾರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು.

ADVERTISEMENT

ರಥೋತ್ಸವಕ್ಕೆ ಹೊಸನಗರ, ಸಾಗರ, ತೀರ್ಥಹಳ್ಳಿ ಸೇರಿ ಬೇರೆ ಊರಿನಲ್ಲಿ ನೆಲೆಸಿರುವ ಬ್ರಾಹ್ಮಣ ಸಮುದಾಯದವರು ಪಾಲ್ಗೊಂಡಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.

ದೇಗುಲ ಸಮಿತಿ ಅಧ್ಯಕ್ಷ ಸುರೇಶ್ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಕಾಮತ್, ಪ್ರಮುಖರಾದ ನೂಲಿಗ್ಗೇರಿ ಭಾಸ್ಕರಭಟ್, ಅನಂತಕುಮಾರ್ ಶೆಣೈ, ರಾಮಕುಮಾರ್ ಶೆಣೈ, ರಾಘವೇಂದ್ರ ವಿ.ಕಿಣಿ, ವಿಠಲ ಭಟ್, ವಿಷ್ಣು ಕಾಮತ್, ಸುಧೀಂದ್ರ ಪಂಡಿತ್, ಭಾಸ್ಕರ ಪಂಡಿತ್, ನರೇಂದ್ರ ಪೈ ಹಾಗೂ ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.