
ಪ್ರಜಾವಾಣಿ ವಾರ್ತೆ
ಪ್ರಾತಿನಿಧಿಕ ಚಿತ್ರ
ರಿಪ್ಪನ್‌ಪೇಟೆ: ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳಗಲ್ಲು ಗ್ರಾಮದ ಶಾಖವಳ್ಳಿ ಮೀಸಲು ಅರಣ್ಯ ಒತ್ತುವರಿ ಜಮೀನಿನಲ್ಲಿ ಕಾಡುಕೋಣ ವಿದ್ಯುತ್ ಸ್ಪರ್ಶದಿಂದ ಸಾವು ಕಂಡ ಘಟನೆ ಗುರುವಾರ ನಡೆದಿದೆ.
ರಾಜು ಎಂಬ ರೈತನಿಗೆ ಸೇರಿದ ಬತ್ತದ ಜಮೀನಿಗೆ ಬೆಳೆ ರಕ್ಷಣೆಗಾಗಿ ತಂತಿ ಬೇಲಿ ನಿರ್ಮಿಸಿ 11 ಕೆ ವಿ ವಿದ್ಯುತ್ ಲೈನಿನಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪರಿಣಾಮ ಆಹಾರ ಹುಡುಕಿಕೊಂಡು ಬಂದ ಕಾಡುಕೋಣದ ಕಾಲಿಗೆ ವಿದ್ಯುತ್ ಪ್ರಹರಿಸಿ ಸಾವನ್ನಪ್ಪಿದೆ.
ಸ್ಥಳಕ್ಕೆ ಸಾಗರ ಡಿಎಫ್‌ಒ ಮೋಹನ್ ಕುಮಾರ್ ಭೇಟಿ ನೀಡಿದ್ದರು.
ಈ ಕುರಿತು ಹೊಸನಗರ ವಲಯ ಅರಣ್ಯಧಿಕಾರಿ ಅನಿಲ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿ ಹಾಲೇಶ್ ಸಿಬ್ಬಂದಿಗಳಾದ ಮಂಜುನಾಥ್, ಚಳ್ಳಯ್ಯ ಮತ್ತು ಇತರರು ಹಾಜರಿದ್ದರು.
ಈ ಕುರಿತು ಅಧಿಕಾರಿಗಳು ಪ್ರಕರಣ ದಾಖಲಿಸಿ ಕೊಂಡು ಮುಂದಿನ ತನಿಖೆ ಕ್ರಮ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.