ADVERTISEMENT

ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ವನ್ಯಜೀವಿಗಳಿಗೆ ಸಂಕಷ್ಟ

ಸುಸಜ್ಜಿತ ಚಿಕಿತ್ಸಾಲಯವಿದ್ದರೂ ಎಕ್ಸ್‌ರೇ, ಸ್ಕ್ಯಾನಿಂಗ್ ಇಲ್ಲ

ಚಂದ್ರಹಾಸ ಹಿರೇಮಳಲಿ
Published 17 ನವೆಂಬರ್ 2019, 19:46 IST
Last Updated 17 ನವೆಂಬರ್ 2019, 19:46 IST
ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ವನ್ಯಜೀವಿಗಳ ಚಿಕಿತ್ಸಾಲಯ.
ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ವನ್ಯಜೀವಿಗಳ ಚಿಕಿತ್ಸಾಲಯ.   

ಶಿವಮೊಗ್ಗ:ತ್ಯಾವರೆಕೊಪ್ಪಹುಲಿ ಮತ್ತು ಸಿಂಹಧಾಮದ ವನ್ಯಜೀವಿಗಳ ಚಿಕಿತ್ಸಾಲಯದಲ್ಲಿ ಎಕ್ಸ್‌ರೇ, ಸ್ಕ್ಯಾನಿಂಗ್ ಯಂತ್ರಗಳ ಸೌಲಭ್ಯಗಳಿಲ್ಲದ ಪರಿಣಾಮ ನಗರದ ಪಶು ವೈದ್ಯಕೀಯ ಆಸ್ಪತ್ರೆಗೆಪ್ರಾಣಿ, ಪಕ್ಷಿಗಳನ್ನುಕರೆತರುತ್ತಿದ್ದಾರೆ.

ವರ್ಷದ ಹಿಂದೆ ಆರಂಭಗೊಂಡ ಚಿಕಿತ್ಸಾಲಯ ಧಾಮದ ವನ್ಯಜೀವಿಗಳ ಪಾಲಿಗೆ ಸಂಜೀವಿನಿಯಾಗಿದೆ. ಇರುವ ಸೌಕರ್ಯಗಳನ್ನೇ ಸೂಕ್ತವಾಗಿ ಬಳಸಿಕೊಂಡು ಪ್ರಾಣಿ, ಪಕ್ಷಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ,ಅಗತ್ಯ ಸಮಯಗಳಲ್ಲಿಶಸ್ತ್ರಚಿಕಿತ್ಸೆ ಕೈಗೊಳ್ಳಲು ಬೇಕಾದ ಯಂತ್ರಗಳಿಲ್ಲ.

ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 10 ಕಿ.ಮೀ ದೂರದಲ್ಲಿ 600 ಹೆಕ್ಟೇರ್‌ ಪ್ರದೇಶದಲ್ಲಿ ಧಾಮವಿದೆ. ಹುಲಿ ಮತ್ತು ಸಿಂಹಗಳಿಗಾಗಿಯೇ 35 ಹೆಕ್ಟೇರ್ ಪ್ರತ್ಯೇಕ ಸ್ಥಳ ಮೀಸಲಿಡಲಾಗಿದೆ. 28 ಬಗೆಯ ವನ್ಯಜೀವಿಗಳು ಸೇರಿ ಒಟ್ಟು 332 ಪ್ರಾಣಿ–ಪಕ್ಷಿಗಳು ಇಲ್ಲಿವೆ.ಸಫಾರಿಯಲ್ಲಿ ಪಂಜರದ ಒಳಗೆ, ಹೊರಗೆ ಹಲವು ಬಗೆಯ ಪ್ರಾಣಿ, ಪಕ್ಷಿಗಳು, ಸರೀಸೃಪಗಳಿಗೆ ಆಸರೆ ಕಲ್ಪಿಸಲಾಗಿದೆ.ಎಷ್ಟೇ ಎಚ್ಚರಿಕೆ ವಹಿಸಿದರೂ ಪ್ರಾಣಿಗಳ ನಡುವೆಯೇ ಪರಸ್ಪರ ಕಿತ್ತಾಟಸಹಜ. ಕೆಲವು ಬಾರಿ ಈ ಕಿತ್ತಾಟಗಳು ವಿಕೋಪಕ್ಕೆ ಹೋಗಿ ಗಾಯ ಮಾಡಿಕೊಳ್ಳುತ್ತವೆ.ಅಂತಹ ಸಮಯದಲ್ಲಿತಕ್ಷಣ ಪ್ರಾಥಮಿಕ ಚಿಕಿತ್ಸೆ ದೊರಕಿಸಬೇಕು.ಕೆಲವು ವೇಳೆ ಗಂಭೀರ ಸ್ವರೂಪದ ಗಾಯ, ಮೂಳೆ ಮುರಿತವೂ ಆಗಿರುತ್ತದೆ.

ADVERTISEMENT

ಸಾಕಷ್ಟು ಪರಿಕರ ಹೊಂದಿರುವ ವನ್ಯಧಾಮದ ಚಿಕಿತ್ಸಾಲಯದಲ್ಲಿ ಸುಸಜ್ಜಿತ ಎಕ್ಸ್‌ರೇ ಯಂತ್ರಇಲ್ಲ. ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕಾದ ಸಮಯದಲ್ಲಿ ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿಗೆ ತಂದು ಸ್ಕ್ಯಾನಿಂಗ್, ಎಕ್ಸ್‌ರೇ ತೆಗೆಸಲಾಗುತ್ತಿದೆ. ನಂತರ ಮತ್ತೆ ಸಫಾರಿಗೆ ಕರೆದುಕೊಂಡು ಹೋಗಲಾಗುತ್ತದೆ.ಹೀಗೆ ಕರೆತಂದು ಮತ್ತೆ ಕರೆದುಕೊಂಡು ಹೋಗಲು ಸಾಕಷ್ಟು ಸಮಯದ ಜತೆಗೆ ಅಪಾಯ ಎದುರಿಸಬೇಕಾಗುತ್ತದೆ.

ಬೆಂಗಳೂರಿನ ಬನ್ನೇರುಘಟ್ಟ,ಮೈಸೂರಿನ ಕೃಷ್ಣರಾಜೇಂದ್ರ ಮೃಗಾಲಯದ ಆಸ್ಪತ್ರೆಗಳಲ್ಲಿ ಎಕ್ಸ್‌ರೇಯಂತ್ರ ಸೇರಿ ಅಗತ್ಯ ಪರಿಕರಗಳಿವೆ. ಉಳಿದಂತೆ ರಾಜ್ಯದ ಯಾವ ಮೃಗಾಲಯದಲ್ಲೂ ಇಂತಹ ಸೌಲಭ್ಯಗಳಿಲ್ಲ.

ಸುಮಾರು ₹8 ಲಕ್ಷದಿಂದ 10 ಲಕ್ಷ ವೆಚ್ಚದ ಈ ಯಂತ್ರಖರೀದಿಸಿದರೆ ಯಾವುದೇ ಪ್ರಾಣಿ, ಪಕ್ಷಿಯ ಯಾವ ಅಂಗಕ್ಕೆ ಏನು ಆಗಿದೆ ಎಂದು ನಿಖರವಾಗಿ ತಿಳಿದುಕೊಂಡು ಶಸ್ತ್ರಚಿಕಿತ್ಸೆ ಮಾಡಬಹುದಾಗಿದೆ.

‘ವರ್ಷದ ಹಿಂದಷ್ಟೇ ಚಿಕಿತ್ಸಾಲಯ ಆರಂಭಿಸಲಾಗಿದೆ. ಕಾಯಂ ವನ್ಯಜೀವಿ ವೈದ್ಯರ ನೇಮಕವೂ ಆಗಿದೆ. ಎಕ್ಸ್‌ರೇ, ಸ್ಕ್ಯಾನಿಂಗ್ಯಂತ್ರಗಳ ಖರೀದಿಗೂ ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ಎಲ್ಲ ಸೌಲಭ್ಯಗಳೂ ಚಿಕಿತ್ಸಾಲಯಕ್ಕೆ ದೊರಕಲಿವೆ’ ಎಂದು ಧಾಮದ ಮುಖ್ಯಸ್ಥಮುಖಂದ್ ಚಂದ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.