ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕಂದಿಕೆರೆ ಹೋಬಳಿ ಸಿದ್ದನಕಟ್ಟೆ ಗ್ರಾಮದಲ್ಲಿ ಯುವತಿಯೊಬ್ಬರು ಆತ್ಮಹತ್ಯೆಗೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳ ಸಾವಿಗೆ ಪ್ರಿಯಕರ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಈಚೆಗೆ ಅಶ್ವಿನಿ (20) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೊಟ್ಟೆ ನೋವು ತಾಳಲಾರದೆ ಈ ನಿರ್ಧಾರ ಕೈಗೊಂಡಿದ್ದಳು ಎಂದು ಪೋಷಕರು ಭಾವಿಸಿದ್ದರು. ಆದರೆ, ಯುವತಿ ಮೊಬೈಲ್ ಸಿಕ್ಕ ಬಳಿಕ ನಿಖರ ಕಾರಣ ತಿಳಿದು ಬಂದಿದೆ.
ಪ್ರಿಯಕರ ಚೇತನ್ ಮತ್ತೊಂದು ಯುವತಿಯನ್ನು ಪ್ರೀತಿಸುತ್ತಿರುವ ಆಡಿಯೊ, ವಿಡಿಯೊ ಅಶ್ವಿನಿಗೆ ಸಿಕ್ಕಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪೋಷಕರು ದೂರಿದ್ದಾರೆ.
ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.