ADVERTISEMENT

ತುಮಕೂರು: ಸಮ ಸಮಾಜ ನಿರ್ಮಾಣ; ಸಿಐಟಿಯು ಶ್ರಮ

​ಪ್ರಜಾವಾಣಿ ವಾರ್ತೆ
Published 30 ಮೇ 2020, 16:33 IST
Last Updated 30 ಮೇ 2020, 16:33 IST

ತುಮಕೂರು: ರಕ್ತ, ಬೆವರಿನ ಮೂಲಕ ಸಂಪತ್ತಿನ ಸೃಷ್ಟಿಗೆ ಸದಾ ಶ್ರಮಿಸುವ ಶ್ರಮಿಕರನ್ನು ಬೇಡುವಂತೆ ಮಾಡಿರುವ ಈ ವ್ಯವಸ್ಥೆಯನ್ನು ಬದಲಿಸಬೇಕು. ಅಸಮಾನ ವ್ಯವಸ್ಥೆ ಬದಲಿಸಿ ಸಮ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸಿಐಟಿಯು 50 ವರ್ಷಗಳಿಂದ ದುಡಿಯುತ್ತಿದೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದರು.

ನಗರದ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕರ್ನ್ ಲಿಬರರ್ಸ್ ಹಾಗೂ ತ್ರಿವೇಣಿ ಏರೋನಾಟಿಕ್ಸ್ ಸಂಸ್ಥೆಗಳ ಕಾರ್ಮಿಕ ಸಂಘಗಳು ಸಿಐಟಿಯು 50ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ‘ಮಾನವ ಸರಪಳಿ ರಚನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಐಟಿಯು ಜಾತಿ, ಧರ್ಮ, ಭಾಷೆ, ಪ್ರದೇಶಗಳ ಮಿತಿಗಳನ್ನು ಮೀರಿ ಮಾನವೀಯ ನೆಲೆಯಲ್ಲಿ ಹೋರಾಟಗಳನ್ನು ರೂಪಿಸುತ್ತಿದೆ. ಶೋಷಣೆರಹಿತ ಸಮಾಜ ಕಟ್ಟುವಂತಹ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂದರು.

ADVERTISEMENT

ಸಿಐಟಿಯು ತಾಲ್ಲೂಕು ಘಟಕದ ಕಾರ್ಯದರ್ಶಿ ರಂಗಧಾಮಯ್ಯ ಮಾತನಾಡಿದರು. ಕರ್ನ್ ಲಿಬರರ್ಸ್ ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ಸಿಐಟಿಯು ತಾಲ್ಲೂಕು ಖಜಾಂಚಿ ಹುಚ್ಚೇಗೌಡ, ತ್ರಿವೇಣಿ ಏರೋನಾಟಿಕ್ಸ್ ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಲಿಂಗೇಶ್, ಖಜಾಂಚಿ ಉಮೇಶ್, ಮುಖಂಡರಾದ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.