ADVERTISEMENT

₹28 ಸಾವಿರಕ್ಕೆ ಕುಸಿದ ಉಂಡೆ ಕೊಬ್ಬರಿ ಧಾರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 13:52 IST
Last Updated 3 ಜುಲೈ 2025, 13:52 IST
ಕೊಬ್ಬರಿ
ಕೊಬ್ಬರಿ   

ತುಮಕೂರು: ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗಿದ್ದ ಉಂಡೆ ಕೊಬ್ಬರಿ ಧಾರಣೆ ಮೂರು ದಿನಗಳ  ಅಂತರದಲ್ಲಿ ಕ್ವಿಂಟಲ್‌ಗೆ ₹3,606ರಷ್ಟು ಕುಸಿದಿದ್ದು, ₹28,000ಕ್ಕೆ ಇಳಿದಿದೆ.  

ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ (ಜೂನ್ 30) ನಡೆದ ಹರಾಜಿನಲ್ಲಿ ಉಂಡೆ ಕೊಬ್ಬರಿ ₹31,606ಕ್ಕೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಸದ್ಯ  ಮಾದರಿ ಬೆಲೆ ₹25,500 ಹಾಗೂ ಕನಿಷ್ಠ ಬೆಲೆ ₹24 ಸಾವಿರ ಇದೆ.ಗುರುವಾರ ಮಾರುಕಟ್ಟೆಗೆ 4,463 ಕ್ವಿಂಟಲ್(10,381 ಚೀಲ) ಕೊಬ್ಬರಿ ಆವಕವಾಗಿತ್ತು. 

ಕೊಬ್ಬರಿ ಆವಕ ಹೆಚ್ಚುತ್ತಿರುವುದು ಬೆಲೆ ಇಳಿಕೆಗೆ ಮುಖ್ಯ ಕಾರಣ ಎಂದು ವರ್ತಕರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.