ತುಮಕೂರು: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಉಂಡೆ ಕೊಬ್ಬರಿ ಕ್ವಿಂಟಲ್‌ಗೆ ₹31,606ಕ್ಕೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.
ಕಳೆದ ನಾಲ್ಕು ದಿನಗಳಲ್ಲಿ ಉಂಡೆ ಕೊಬ್ಬರಿ ಧಾರಣೆ ಕ್ವಿಂಟಲ್‌ಗೆ ₹2,488 ಹೆಚ್ಚಳವಾಗಿದೆ. ’ಮಾದರಿ’ ದರ ₹31,606 ಹಾಗೂ ಕನಿಷ್ಠ ₹27 ಸಾವಿರಕ್ಕೆ ಹರಾಜಾಗಿದೆ. ತಿಪಟೂರು ಎಪಿಎಂಸಿ ಮಾರುಕಟ್ಟೆಗೆ ಸೋಮವಾರ 4,182 ಕ್ವಿಂಟಲ್ (9,727 ಚೀಲ) ಉಂಡೆ ಕೊಬ್ಬರಿ ಆವಕವಾಗಿತ್ತು.
ಕೊಬ್ಬರಿ ಆವಕದಲ್ಲೂ ಹೆಚ್ಚಳವಾಗಿದ್ದು, ಬೆಲೆಯೂ ಏರಿಕೆಯಾಗಿದೆ. ಪ್ರತಿ ಹರಾಜಿನ ಸಮಯದಲ್ಲಿ 2,500 ಕ್ವಿಂಟಲ್‌ನಿಂದ 3 ಸಾವಿರ ಕ್ವಿಂಟಲ್ ವರೆಗೆ ಆವಕವಾಗುತಿತ್ತು. ಮಾರ್ಚ್‌ನಿಂದ ಜೂನ್ 26ರ ನಡುವೆ ಎಂದೂ 3 ಸಾವಿರ ಕ್ವಿಂಟಲ್ ದಾಟಿರಲಿಲ್ಲ. ಈ ವಾರ ಆವಕದಲ್ಲೂ ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.