ADVERTISEMENT

ತೆಂಗು ಉತ್ಪನ್ನಕ್ಕೆ ಬೇಡಿಕೆ: ನಾಗೇಶ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 7:50 IST
Last Updated 10 ಅಕ್ಟೋಬರ್ 2021, 7:50 IST
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಆಹಾರ ಸಂಸ್ಕರಣೆ ಉದ್ದಿಮೆ ಸ್ಥಾಪನೆ ಕುರಿತ ಕಾರ್ಯಾಗಾರವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್ ಉದ್ಘಾಟಿಸಿದರು. ಸಿಎಫ್‌ಟಿಆರ್‌ಐ ಮುಖ್ಯ ವಿಜ್ಞಾನಿ ಡಾ.ಎಂ.ಮಾಧವ ನಾಯ್ಡು, ಎಸ್ಸಿ–ಎಸ್ಟಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸೇವಂತ್ ವಾಸುದೇವ್, ಕಾರ್ಯದರ್ಶಿ ಮೃತ್ಯುಂಜಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಗೋವಿಂದಪ್ಪ, ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್ ಉಪಸ್ಥಿತರಿದ್ದರು

ತುಮಕೂರು: ಕಲ್ಪತರು ನಾಡಿನಲ್ಲಿ ಬೆಳೆಯುವ ತೆಂಗು ಬಳಹ ಉತ್ಕೃಷ್ಟ ಮಾದರಿಯದ್ದಾಗಿದ್ದು, ತೆಂಗಿನಿಂದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿ, ರಫ್ತು ಮಾಡಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್ ತಿಳಿಸಿದರು.

ಮೈಸೂರಿನ ಸಿಎಫ್‌ಟಿಆರ್‌ಐ ಹಾಗೂ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಉದ್ದಿಮೆದಾರರ ಸಂಘದ ಸಹಯೋಗದೊಂದಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಶುಕ್ರವಾರ ನಡೆದ ‘ಆಹಾರ ಸಂಸ್ಕರಣೆ ಉದ್ದಿಮೆ ಸ್ಥಾಪಿಸಲು ಅವಕಾಶ ಹಾಗೂ 2020-25ರ ನೂತನ ಕೈಗಾರಿಕಾ ನೀತಿ ಮತ್ತು ಬಂಡವಾಳ ಹೂಡಿಕೆಯ ಅವಕಾಶಗಳ’ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ತೆಂಗು ಬೆಳೆಯನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯ ತೆಂಗಿನಲ್ಲಿ ಹೆಚ್ಚಾಗಿ ಸಲ್ಫರ್ ಮತ್ತು ಪಾರ್ಸೆಟ್ ಅಂಶಗಳು ಕಡಿಮೆಯಿರುವ ಕಾರಣ ತೆಂಗಿನಿಂದ ತಯಾರಿಸಲ್ಪಡುವ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿರುತ್ತದೆ. ಹಾಗಾಗಿ ತೆಂಗು ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಮುಖ್ಯ ಬೆಳೆಗಳಾಗಿ ಬೆಳೆಯುವಂತಹ ತೆಂಗು, ಮಾವು ಹಾಗೂಹುಣಸೆ ಬೆಳೆಗಳಿಂದ ಆಹಾರ ಉತ್ಪಾದನೆ ಮಾಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಉತ್ಪನ್ನಗಳ ತಯಾರಿಕೆ ಕುರಿತು ಮಾಹಿತಿ ನೀಡಲಾಯಿತು ಎಂದರು.

ತೆಂಗಿನ ಕಾಯಿಯಿಂದ ತೆಂಗಿನ ಪುಡಿ, ತೆಂಗಿನೆಣ್ಣೆ, ತೆಂಗಿನ ಬೆಣ್ಣೆ, ತೆಂಗಿನ ನಾರಿನಿಂದ ಫೈಬರ್, ಹಾಸಿಗೆ, ಕಾಯರ್ ಬೋರ್ಡ್, ಹುಣಸೆಯಿಂದ ಹುಣಸೆ ಪುಡಿ, ಪೇಸ್ಟ್, ಜ್ಯೂಸ್ ಉತ್ಪಾದಿಸಬಹುದಾಗಿದೆ. ಈ ಬಗ್ಗೆ ತರಬೇತಿ ನೀಡಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.