ADVERTISEMENT

ಗುರುಪೂರ್ಣಿಮೆ ಪ್ರಯುಕ್ತ ಭಿಕ್ಷಾಟನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:45 IST
Last Updated 15 ಜುಲೈ 2019, 19:45 IST
ಗುರು ಪೂರ್ಣಿಮೆ ಮುನ್ನಾ ದಿನವಾದ ಸೋಮವಾರ ಕುಣಿಗಲ್ ರಸ್ತೆಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಂಸದ ಜಿ.ಎಸ್.ಬಸವರಾಜು ಅವರು ಜೋಳಿಗೆಗೆ ದಾನ ನೀಡುವ ಮೂಲಕ ಭಿಕ್ಷಾಟನೆಗೆ ಚಾಲನೆ ನೀಡಿದರು
ಗುರು ಪೂರ್ಣಿಮೆ ಮುನ್ನಾ ದಿನವಾದ ಸೋಮವಾರ ಕುಣಿಗಲ್ ರಸ್ತೆಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಂಸದ ಜಿ.ಎಸ್.ಬಸವರಾಜು ಅವರು ಜೋಳಿಗೆಗೆ ದಾನ ನೀಡುವ ಮೂಲಕ ಭಿಕ್ಷಾಟನೆಗೆ ಚಾಲನೆ ನೀಡಿದರು   

ತುಮಕೂರು: ಇಲ್ಲಿನ ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ನಗರದ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಭಿಕ್ಷಾಟನೆಗೆ ಕಾರ್ಯಕ್ರಮಕ್ಕೆ ಸಂಸದ ಜಿ.ಎಸ್. ಬಸವರಾಜು ಅವರು ಮಹಿಳೆಯರ ಜೋಳಿಗೆಗೆ ದಾನ ನೀಡುವ ಮೂಲಕ ಚಾಲನೆ ನೀಡಿದರು.

ಸಾಯಿಬಾಬಾ ದೇವಾಲಯದಿಂದ ಆರಂಭವಾದ ಭಿಕ್ಷಾಟನೆ ಕಾರ್ಯಕ್ರಮ ಸದಾಶಿವನಗರ, ಸರಸ್ವತಿಪುರಂ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಿತು.

ನಾಳೆಯ ಗುರುಪೂರ್ಣಿಮೆ ಪ್ರಯುಕ್ತ ಈ ಭಿಕ್ಷಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿಯವರು ತಿಳಿಸಿದರು.

ADVERTISEMENT

ಭಿಕ್ಷಾಟನೆ ಕಾರ್ಯಕ್ರಮದಲ್ಲಿ ದೇವಾಲಯದ ಕೆ.ಎಲ್.ಗುರುಸಿದ್ದಪ್ಪ, ರಾಮಚಂದ್ರಪ್ಪ, ಧನಿಯಾಕುಮಾರ್, ಸತ್ಯಮಂಗಲದ ಸದಣ್ಣ, ವೇಣುಗೋಪಾಲ್, ರಮೇಶ್ ನಿಸರ್ಗ, ಎ.ಆರ್.ನಾಗರಾಜು, ನೇರಳಾಪುರ ಕುಮಾರ್, ವಿಜಯಕುಮಾರ್, ಶಿವಕುಮಾರ್, ಗೋಪಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.