ADVERTISEMENT

ಕುಣಿಗಲ್ | ಗ್ರಾ. ಪಂ. ಸಿಬ್ಬಂದಿ ಕೂಡಿ ಹಾಕಿ ಬೀಗ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:12 IST
Last Updated 21 ಜನವರಿ 2026, 5:12 IST
ಕುಣಿಗಲ್ ಮಡಕೆಹಳ್ಳಿ ಗ್ರಾಮ ಪಂಚಾಯಿತಿಗೆ ಬೀಗ ಹಾಕ್ಕಿದ್ದ ಸದಸ್ಯನಿಂದಲೇ ಬೀಗ ತೆಗಸಿ ನೌಕರರನ್ನು ಸಿಪಿಐ ಮಾದ್ಯಾ ನಾಯಕ್ ಬಂಧಮುಕ್ತಗೊಳಿಸಿದರು
ಕುಣಿಗಲ್ ಮಡಕೆಹಳ್ಳಿ ಗ್ರಾಮ ಪಂಚಾಯಿತಿಗೆ ಬೀಗ ಹಾಕ್ಕಿದ್ದ ಸದಸ್ಯನಿಂದಲೇ ಬೀಗ ತೆಗಸಿ ನೌಕರರನ್ನು ಸಿಪಿಐ ಮಾದ್ಯಾ ನಾಯಕ್ ಬಂಧಮುಕ್ತಗೊಳಿಸಿದರು   

ಕುಣಿಗಲ್: ತಾಲ್ಲೂಕಿನ ಕೊತ್ತಗೆರೆ ಹೋಬಳಿ ಮಡಕೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ಕರ್ತವ್ಯ ಲೋಪದಿಂದ ಅಸಮಾಧಾನಗೊಂಡ ಸದಸ್ಯ ವೆಂಕಟೇಶ್ (ರಾಜಹುಲಿ) ಬೀಗ ಹಾಕಿ ಹೋಗಿದ್ದರು. ಈ ಘಟನೆ ನಂತರ ಪೋಲಿಸರು ಸಿಬ್ಬಂದಿಯನ್ನು ಬಂಧಮುಕ್ತಗೊಳಿಸಿದರು.

ವೆಂಕಟೇಶ್ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಚೇರಿಗೆ ಬಂದಾಗ, ಪಿಡಿಒ ಕಾರ್ಯಾಲಯದಲ್ಲಿ ಇರಲಿಲ್ಲ. ಅಲ್ಲಿದ್ದ ಮಹಿಳಾ ಮತ್ತು ಅಂಗವಿಕಲ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಸದಸ್ಯ, ಕಚೇರಿಗೆ ಬೀಗ ಹಾಕಿ ನಿರ್ಗಮಿಸಿದರು.

ಈ ಮಾಹಿತಿ ತಿಳಿದು, ಸಿಪಿಐ ಮಾದ್ಯಾ ನಾಯಕ್ ಸ್ಥಳಕ್ಕೆ ಬಂದರು. ಕಚೇರಿ ಬಾಗಿಲಿಗೆ ಬೀಗ ಹಾಕಲಾಗಿತ್ತು ಮತ್ತು ಒಳಗೆ ಇಬ್ಬರು ಸಿಬ್ಬಂದಿ ಇದ್ದರು. ಸದಸ್ಯ ವೆಂಕಟೇಶ್ ಅವರನ್ನು ಕರೆಸಿದ ನಂತರ, ‘ಪಿಡಿಒ ನಿಯಮಿತವಾಗಿ ಕಚೇರಿಗೆ ಬರುವುದಿಲ್ಲ. ನೀರಾವರಿ ಸಿಬ್ಬಂದಿಯೂ ಸಕಾಲಕ್ಕೆ ಕೆಲಸಕ್ಕೆ ಬರದ ಕಾರಣ ಕಳೆದ ಐದು ದಿನಗಳಿಂದ ಗ್ರಾಮದ ಕುಡಿಯುವ ನೀರಿನ ಸರಬರಾಜು ಅಸ್ತವ್ಯಸ್ತವಾಗಿದೆ. ಅನೇಕ ಬಾರಿ ಮನವಿ ಮಾಡಿದರೂ ಪರಿಹಾರ ಸಿಗಲಿಲ್ಲ. ಇದಕ್ಕೆ ಪ್ರತಿಭಟನೆಯಾಗಿ ಈ ಕ್ರಮ ಕೈಕೊಳ್ಳಲಾಗಿದೆ’ ಎಂದು ವಿವರಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಸಿಬ್ಬಂದಿ ಕರ್ತವ್ಯ ಲೋಪದಿಂದಾಗಿ ಜನರ ಸಮಸ್ಯೆಗಳು ಹೆಚ್ಚಾಗಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕೇ ಹೊರತು; ಸರ್ಕಾರಿ ಕಚೇರಿಗೆ ಬೀಗಹಾಕುವುದು ಸರಿಯಲ್ಲ ಎಂದು ಸಿಪಿಐ ಮಾದ್ಯಾ ನಾಯಕ್ ತಿಳಿಸಿದರು.

ಕುಣಿಗಲ್: ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಮಡಕೆಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಬ್ಬಂದಿ ಕಾರ್ಯವೈಖರಿ ಖಂಡಿಸಿದ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ( ರಾಜಹುಲಿ), ಮಂಗಳವಾರ ಸಿಬ್ಬಂದಿಯನ್ನು ಕೂಡಿ ಹಾಕ್ಕಿ ಬೀಗಜಡಿದು ಹೋಗಿದ್ದು, ಸಿಪಿಐ ಮಾದ್ಯಾ ನಾಯಕ್ ಸದಸ್ಯನನ್ನು ವಶಕ್ಕೆ ಪಡೆದು ಸಿಬ್ಬಂದಿಯನ್ನು ಬಂಧಮುಕ್ತ ಗೊಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಮಂಗಳವಾರ ಪಂಚಾಯಿತಿ ಕಚೇರಿ ಬಳಿ ಬಂದಾಗ ಪಿಡಿಓ 11 ಗಂಟೆಯಾಗಿದ್ದರೂ, ಬಂದಿರಲ್ಲಿಲ್ಲ. ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿ ಮತ್ತು ಅಂಗವಿಕಲ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅಸಮಾಧಾನಗೊಂಡ ಸದಸ್ಯ ಬೀಗ ಜಡಿದು ಹೋಗಿದ್ದರು.

ಮಾಹಿತಿ ತಿಳಿದ ಸಿಪಿಐ ಮಾದ್ಯಾ ನಾಯಕ್ ಸ್ಥಳಕ್ಕೆ ಬಂದಾಗ ಸಿಬ್ಬಂದಿಗಳಿಬ್ಬರು ಕಚೇರಿಯಲ್ಲಿರುವುದು ಕಂಡು ಬಂದಿದ್ದು, ಕಚೇರಿಗೆ ಬೀಗ ಜಡಿಯಲಾಗಿತ್ತು. ಸದಸ್ಯ ವೆಂಕಟೇಶ್ ನನ್ನು ಕರೆಸಿದಾಗ, ಪಿಡಿಓ ಅನೇಕ ದಿನಗಳಿಂದ ಸಕಾಲದಲ್ಲಿ ಕಚೇರಿಗೆ ಬರುತ್ತಿಲ್ಲ, ಇನ್ನೂ ವಾಟರ್ ಮೆನ್ ಸಹ ಸಕಾಲಕ್ಕೆ ಬರದ ಕಾರಣ ಕಳೆದ ಐದು ದಿನಗಳಿಂದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯಾಗಿದೆ, ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗದ ಕಾರೆಣ ಕೃತ್ಯ ಮಾಡಿರುವುದಾಗಿ ತಿಳಿಸಿದರು.

ಗ್ರಾಮಪಂಚಾಯಿತಿ ಅಧಿಕಾರಿಗಳು ಕರ್ತವ್ಯ ಪಾಲನೆಯಲ್ಲಿ ಲೋಪವಾಗಿ, ಜನ ಸಮಸ್ಯೆ ಹೆಚ್ಚಾಗಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದನ್ನು ಬಿಟ್ಟು, ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡುವುದು ಸರಿಯಲ್ಲ ಎಂದು ತಿಳಿಸಿ ವಶಕ್ಕೆ ಪಡೆದಿದ್ದಾರೆ

ಕುಣಿಗಲ್ ಮಡಕೆಹಳ್ಳಿ ಗ್ರಾಮಪಂಚಾಯಿತಿಗೆ ಬೀಗ ಹಾಕ್ಕಿದ್ದ ಸದಸ್ಯನಿಂದಲೇ ಬೀಗ ತೆಗಸಿ ನೌಕರರನ್ನು ಸಿಪಿಐ ಮಾದ್ಯಾ ನಾಯಕ್ ಬಂಧಮುಕ್ತಗೊಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.