ADVERTISEMENT

ಕನ್ನಡ ಭಾಷೆಯಲ್ಲಿ ಗುಜರಾತಿ ಬಾಲಕನಿಗೆ 125 ಅಂಕ!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 4:15 IST
Last Updated 11 ಆಗಸ್ಟ್ 2020, 4:15 IST
ಸಾರ್ಥಕ್
ಸಾರ್ಥಕ್   

ಕೊರಟಗೆರೆ: ಪಟ್ಟಣದ ರವೀಂದ್ರ ಭಾರತಿ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿ ಗುಜರಾತ್ ಮೂಲದ ಸಾರ್ಥಕ್ ನಾಕಾನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾರ್ಥಕ್ 595 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ನಸರಿನ್ ನಾಕಾನಿ ಹಾಗೂ ಮೀನ ಬೇನ್ ಅವರ ಪುತ್ರ ಸಾರ್ಥಕ್ ನಾಕಾನಿ. ಇಪ್ಪತ್ತು ವರ್ಷಗಳ ಹಿಂದೆ ನರಸಿನ್ ಅವರು ಉದ್ಯೋಗ ಹುಡುಕಿ ಕೊರಟಗೆರೆಗೆ ಬಂದರು. ಸಣ್ಣ ಅಂಗಡಿ ಇಟ್ಟುಕೊಂಡು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಈ ಕುಟುಂಬ ಮನೆಯಲ್ಲಿ ಗುಜರಾತಿ ಮಾತನಾಡುತ್ತದೆ. ತಂದೆ, ತಾಯಿಗೆ ಕನ್ನಡ ಮಾತಾಡುವುದು ಕೊಂಚ ತೊಡಕು. ಇಂತಹ ಕುಟುಂಬದ ಕುಡಿ 125 ಅಂಕ ಪಡೆದಿರುವುದು ವಿಶೇಷ. ಇಂಗ್ಲಿಷ್ ಹಾಗೂ ಹಿಂದಿ ವಿಷಯಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.

ADVERTISEMENT

‘ಅಂದಿನ ಪಾಠವನ್ನು ಅಂದೇ ಓದಿ ಮುಗಿಸುವ ಅಭ್ಯಾಸ ರೂಢಿಸಿಕೊಂಡಿದ್ದರಿಂದ ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು. ಐಎಎಸ್ ಅಥವಾ ಐಪಿಎಸ್ ಮಾಡುವ ಗುರಿ ಇದೆ’ ಎಂದು ಸಾರ್ಥಕ್ ನುಡಿಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.