ಹುಳಿಯಾರು: ಪಟ್ಟಣದ ಗಾಂಧಿಪೇಟೆ ಶನೇಶ್ಚರಸ್ವಾಮಿ ಕುಂಭಾಭಿಷೇಕ ಹಾಗೂ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
26ರಿಂದ ಧಾರ್ಮಿಕ ಕಾರ್ಯಗಳು ಆರಂಭವಾಗಿ ಗ್ರಾಮ ದೇವತೆಗಳಾದ ದುರ್ಗಾಪರಮೇಶ್ವರಿ, ಹುಳಿಯಾರಮ್ಮ ಹಾಗೂ ಆಂಜನೇಯಸ್ವಾಮಿ ಶನೇಶ್ಚರ ದೇಗುಲಕ್ಕೆ ಬಂದಿದ್ದವು. ಗಂಗಾಸ್ನಾನ ನಡೆಯಿತು. ಮಂಗಳವಾರ ಗಣಪತಿ ಹೋಮ, ಶನೇಶ್ಚರ ಹೋಮ ನಡೆದವು. ನಂತರ ಕುಂಭಾಭಿಷೇಕ ನಡೆದು 11 ಗಂಟೆಗೆ ರಥೋತ್ಸವ ನಡೆಯಿತು. ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.