
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕೆರೆಗಳಿಂದ ರೈತರು ತಮ್ಮ ಜಮೀನಿಗೆ ಮಣ್ಣು ಸಾಗಿಸುವಾಗ ಕಾನೂನು ಮತ್ತು ವೈಜ್ಞಾನಿಕ ನಿಯಮ ಪಾಲಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡ ‘ಕೆರೆ ಅಭಿವೃದ್ಧಿ ಸಮಿತಿ’ ರಚಿಸಿಕೊಂಡು ಪಾರದರ್ಶಕವಾಗಿ ಹೂಳೆತ್ತುವ ಕಾರ್ಯ ನಡೆಯಬೇಕು ಎಂದರು.
ಗುರುವಾರ ತಾಲ್ಲೂಕು ಆಡಳಿತ ಕಚೇರಿಯಲ್ಲಿ ನಡೆದ ಕೆರೆ ಮಣ್ಣು ಮತ್ತು ಮರಳು ವಿಲೇವಾರಿ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನ 38 ಕೆರೆಗಳಿಗೂ ಆಯಾ ಗ್ರಾಮದ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಮಿತಿ ತೀರ್ಮಾನದಂತೆ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ತಹಶೀಲ್ದಾರ್ ಮಮತಾ ಎಂ.ಮಾತನಾಡಿ, ಕೆರೆ ಮಣ್ಣನ್ನು ಗರಿಷ್ಠ ಮೂರು ಅಡಿ ಆಳದವರೆಗೆ ಮಾತ್ರ ತೆಗೆಯಲು ಅವಕಾಶ ಇದೆ. ಮಣ್ಣಿನ ಹೆಸರಿನಲ್ಲಿ ಮರಳು ದುರ್ಬಳಕೆ ಮಾಡುವುದು ಅಥವಾ ಕೆರೆ ಗೋಮಾಳ, ಖರಾಬು ಜಾಗದಲ್ಲಿ ಮಣ್ಣು ತೆಗೆಯುವುದು ಕಾನೂನು ಬಾಹಿರ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಗಣಿ ಇಲಾಖೆ ಭೂ ವಿಜ್ಞಾನಿ ರೇಷ್ಮಾ ಭಾನು, ವಾಣಿಜ್ಯ ಉದ್ದೇಶಕ್ಕಾಗಿ ಮಣ್ಣು ಬಳಸುವವರು ಕಡ್ಡಾಯವಾಗಿ ಇಲಾಖೆ ಅನುಮತಿ ಪಡೆದು ರಾಜಧನ ಪಾವತಿಸಬೇಕು ಎಂದರು. ಕೇವಲ ಮೇಲ್ಪದರದ ಮಣ್ಣು ಮಾತ್ರ ನಿಗದಿತ ಆಳದಲ್ಲಿ ತೆಗೆಯಲು ಅವಕಾಶ ನೀಡಲಾಗುವುದು ಎಂದರು.
ಪಿಎಸ್ಐ ಹೇಮಂತ್, ಮಣ್ಣು ಸಾಗಿಸುವ ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳಿಗೆ ವಿಮೆ ಮತ್ತು ಚಾಲನಾ ಪರವಾನಗಿ ಸೇರಿದ ಎಲ್ಲ ದಾಖಲೆ ಕಡ್ಡಾಯ ಇರಬೇಕು ಎಂದರು.
ಜೆಸಿಬಿ ಮಾಲೀಕ ರಮೇಶ್ ಮತ್ತು ಶ್ರೀಹರ್ಷ ಮಾತನಾಡಿ, ರೈತರ ಕೃಷಿಗೆ ಸಹಕರಿಸುವಾಗ ಅಧಿಕಾರಿಗಳು ವಾಸ್ತವ ಸ್ಥಿತಿ ತಿಳಿದು ವರ್ತಿಸಬೇಕು ಎಂದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ವಕೀಲರು ಮತ್ತು ರೈತ ಮುಖಂಡರು ಭಾಗವಹಿಸಿದ್ದರು.
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕೆರೆಗಳಿಂದ ರೈತರು ತಮ್ಮ ಜಮೀನುಗಳಿಗೆ ಮಣ್ಣನ್ನು ಸಾಗಿಸುವಾಗ ಕಾನೂನುಬದ್ಧ ಹಾಗೂ ವೈಜ್ಞಾನಿಕ ನಿಯಮಗಳನ್ನು ಪಾಲಿಸಬೇಕು. ಇದಕ್ಕಾಗಿ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ 'ಕೆರೆ ಅಭಿವೃದ್ಧಿ ಸಮಿತಿ' ರಚಿಸಿಕೊಳ್ಳುವ ಮೂಲಕ ಪಾರದರ್ಶಕವಾಗಿ ಹೂಳೆತ್ತುವ ಪ್ರಕ್ರಿಯೆ ನಡೆಯಬೇಕು ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ತಿಳಿಸಿದರು.
ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೆರೆ ಮಣ್ಣು ಮತ್ತು ಮರಳು ವಿಲೇವಾರಿ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ 38 ಕೆರೆಗಳಿಗೂ ಆಯಾ ಗ್ರಾಮದ ರೈತ ಮುಖಂಡರನ್ನೊಳಗೊಂಡ ಸಮಿತಿಯನ್ನು ರಚಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಶಾಸಕರು, ಸಮಿತಿಯ ತೀರ್ಮಾನದಂತೆ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ತಹಶೀಲ್ದಾರ್ ಮಮತಾ ಎಂ ಮಾತನಾಡಿ,ಕೆರೆಯ ಮಣ್ಣನ್ನು ಗರಿಷ್ಠ ಮೂರು ಅಡಿಗಳವರೆಗೆ ಮಾತ್ರ ತೆಗೆಯಲು ಅವಕಾಶವಿದೆ. ಮಣ್ಣಿನ ಹೆಸರಿನಲ್ಲಿ ಮರಳು ದಂಧೆ ಮಾಡುವುದು ಅಥವಾ ಗೋಮಾಳ, ಖರಾಬು ಜಾಗದಲ್ಲಿ ಮಣ್ಣು ಅಗೆಯುವುದು ಕಾನೂನುಬಾಹಿರ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಗಣಿ ಇಲಾಖೆಯ ಭೂ ವಿಜ್ಞಾನಿ ರೇಷ್ಮಾ ಭಾನು ಮಾತನಾಡಿ, ವಾಣಿಜ್ಯ ಉದ್ದೇಶಗಳಿಗಾಗಿ ಮಣ್ಣು ಬಳಸುವವರು ಕಡ್ಡಾಯವಾಗಿ ಇಲಾಖೆಯ ಅನುಮತಿ ಪಡೆದು ರಾಯಧನ ಪಾವತಿಸಬೇಕು. ಕೇವಲ ಮೇಲ್ಪದರದ ಮಣ್ಣನ್ನು ಮಾತ್ರ ನಿಗದಿತ ಆಳದಲ್ಲಿ ತೆಗೆಯಲು ಅವಕಾಶ ನೀಡಲಾಗುವುದು ಎಂದರು.
ಪಿಎಸ್ಐ ಹೇಮಂತ್ ಮಾತನಾಡಿ, ಮಣ್ಣು ಸಾಗಿಸುವ ಜೆಸಿಬಿ ಮತ್ತು ಟ್ರಾಕ್ಟರ್‌ಗಳಿಗೆ ವಿಮೆ ಹಾಗೂ ಚಾಲನಾ ಪರವಾನಗಿ ಸೇರಿದಂತೆ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಿದರು.
ಜೆಸಿಬಿ ಮಾಲೀಕರಾದ ರಮೇಶ್ ಮತ್ತು ಶ್ರೀಹರ್ಷ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಕೆಲಸ ಮಾಡುವಾಗ ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ಅರಿತು ಸ್ಪಂದಿಸಬೇಕು ಮತ್ತು ಅನಗತ್ಯ ಪ್ರಕರಣಗಳನ್ನು ದಾಖಲಿಸಬಾರದು ಎಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಸ್ವಂತ ಭೂಮಿಯ ಮಣ್ಣನ್ನು ಹೊರಕ್ಕೆ ಸಾಗಿಸಿದರೂ ನಿಯಮಾನುಸಾರ ಅನುಮತಿ ಪಡೆಯುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಶಿವರಾಜಕುಮಾರ್, ತೋಟಗಾರಿಕೆ ಇಲಾಖೆಯ ರಾಜಪ್ಪ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಚಿತ್ತಪ್ಪ, ವಕೀಲ ಶ್ರೀಧರ್ ಹಾಗೂ ರೈತ ಮುಖಂಡರಾದ ರಾಮಚಂದ್ರಯ್ಯ, ಮಧು, ಷಡಾಕ್ಷರಿ ಮತ್ತಿತರರು ಪಾಲ್ಗೊಂಡಿದ್ದರು.
“ಕೆರೆಕಟ್ಟೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈಗಾಗಲೇ ಹಲವು ಕೆರೆಗಳು ಅವನತಿಯ ಹಂತ ತಲುಪಿದ್ದು, ಅವುಗಳನ್ನು ಪುನಶ್ಚೇತನಗೊಳಿಸಿ ಸುಸ್ಥಿತಿಗೆ ತರುವುದು ಪ್ರತಿಯೊಬ್ಬರ ಜವಾಬ್ದಾರಿ."
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.