ADVERTISEMENT

ಶಿರಾ | ಲಾರಿ ಪಲ್ಟಿ: ಗೋಧಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:03 IST
Last Updated 17 ನವೆಂಬರ್ 2025, 6:03 IST
ಶಿರಾ ತಾಲ್ಲೂಕಿನ ಹುಯಿಲ್ ದೊರೆ ಬಳಿ ಭಾನುವಾರ ಲಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದ ಗೋದಿಯನ್ನು ಆಯ್ದುಕೊಂಡ ಜನ
ಶಿರಾ ತಾಲ್ಲೂಕಿನ ಹುಯಿಲ್ ದೊರೆ ಬಳಿ ಭಾನುವಾರ ಲಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದ ಗೋದಿಯನ್ನು ಆಯ್ದುಕೊಂಡ ಜನ   

ಶಿರಾ: ತಾಲ್ಲೂಕಿನ ಹುಯಿಲ್‌ದೊರೆ ಬಳಿ ಭಾನುವಾರ ಎರಡು ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗೋದಿ ತುಂಬಿದ್ದ ಲಾರಿ ಪಲ್ಟಿಯಾಗಿ ರಸ್ತೆಯ ತುಂಬೆಲ್ಲಾ ಚೆಲ್ಲಾಡಿದ್ದ ಗೋದಿಯನ್ನು ತುಂಬಿಕೊಳ್ಳಲು ಜನರು ಮುಗಿಬಿದ್ದರು.

ಶಿರಾದಿಂದ ಹುಳಿಯಾರು ಕಡೆ ಗೋದಿ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಹುಳಿಯಾರು ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಗಾಯಗೊಂಡಿದ್ದಾರೆ.

ರಸ್ತೆಯಲ್ಲಿ ಚೆಲ್ಲಾಡಿದ ಗೋದಿ ತುಂಬಿಕೊಳ್ಳಲು ಮುಗಿಬಿದ್ದ ಜನರು ಪೊರಕೆ ಹಿಡಿದು ಗೋದಿಯನ್ನು ಒಟ್ಟುಗೂಡಿಸಿಕೊಂಡು ಚೀಲದಲ್ಲಿ ತುಂಬಿಕೊಂಡು ಮನೆಗಳಿಗೆ ಕೊಂಡೊಯ್ದರು.

ADVERTISEMENT

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಾ ತಾಲ್ಲೂಕಿನ ಹುಯಿಲ್ ದೊರೆ ಗ್ರಾಮದ ಬಳಿ ಭಾನುವಾರ ಅಪಘಾತದಿಂದ ಲಾರಿ ಪಲ್ಟಿಯಾಗಿ ಗೋದಿ ರಸ್ತೆಯಲ್ಲಿ ಬಿದ್ದಾಗ ಅದನ್ನು ತುಂಬಿಕೊಳ್ಖುತ್ತಿರುವ ಜನರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.