
ಪ್ರಜಾವಾಣಿ ವಾರ್ತೆಕಳ್ಳತನ
ಮಧುಗಿರಿ: ತಾಲ್ಲೂಕಿನ ಕೈಮರದಲ್ಲಿ ಬುಧವಾರ ಶ್ರೀನಿವಾಸ್ ಎಂಬುವವರ ಮನೆ ಬೀಗ ತೆಗೆದು ಬೀರುವಿನಲ್ಲಿದ್ದ ಒಡವೆ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ಬೀರುವಿನಲ್ಲಿದ್ದ 280 ಗ್ರಾಂ ಒಡವೆ, ₹30 ಸಾವಿರ ನಗದು ದೋಚಿದ್ದಾರೆ. ಶ್ರೀನಿವಾಸ್ ಕುಟುಂಬದವರು ಮನೆಗೆ ಬೀಗ ಹಾಕಿ ಕೀ ಅನ್ನು ವಿದ್ಯುತ್ ಮೀಟರ್ ಮೇಲಿಟ್ಟು ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು ಮನೆಯ ಬೀಗ ತೆಗೆದು ಬಂಗಾರದ ಒಡವೆ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.