ತುರುವೇಕೆರೆ: ಪಟ್ಟಣದ ಇಂದಿರಾ ನಗರದ ಜೆಪಿ ಶಾಲಾ ಆವರಣದಲ್ಲಿ ಆಂಗ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಮಕ್ಕಳ ಸಂತೆ ಜರುಗಿತು.
ಪುಟಾಣಿ ಮಕ್ಕಳು ತಮ್ಮ ಮನೆಯಿಂದ ತಂದಿದ್ದ ವಸ್ತುಗಳನ್ನು ಕೂಗಿ ಕೂಗಿ ಮಾರಾಟ ಮಾಡಿದರು. ಕೆಲವು ಮಕ್ಕಳು ಒಂದು ಕೊಂಡರೆ ಒಂದು ಉಚಿತ ಎಂದು ಕೂಗುತ್ತಾ ಗ್ರಾಹಕರನ್ನು ಸೆಳೆಯುತ್ತಿದ್ದರು.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಮನೆಗಳಲ್ಲಿ ಬೆಳೆದಿದ್ದ ವಿವಿಧ ಧವಸ ಧಾನ್ಯ, ತೆಂಗಿನಕಾಯಿ, ಸೊಪ್ಪು, ತರಕಾರಿ, ಹಣ್ಣು ಇತ್ಯಾದಿ ತಂದು ಮಾರಾಟ ಮಾಡಿದರು. ಕೆಲವು ಮಕ್ಕಳು ಪಾನಿಪುರಿ, ಬೇಲ್‌ಪುರಿಯಂತಹ ತಿಂಡಿ ತಿನಿಸುಗಳನ್ನು ಸ್ಳಳದಲ್ಲಿಯೇ ತಯಾರಿಸಿ ಮಾರಾಟ ಮಾಡಿದರು. ಅನೇಕ ಮಕ್ಕಳು ಸೌಂದರ್ಯವರ್ಧಕಗಳನ್ನೂ ಇಟ್ಟು ಲವಲವಿಕೆಯಿಂದ ವ್ಯಾಪಾರ ಮಾಡುತ್ತಿದ್ದರು. ಪೋಷಕರು ಮತ್ತು ಸಾರ್ವಜನಿಕರು ವಸ್ತುಗಳನ್ನು ಕೊಂಡು ಮಕ್ಕಳ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಿದರು.
ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿದ ಗೆಳೆಯರ ಬಳಗದ ಅಧ್ಯಕ್ಷ ಟಿ.ಎನ್.ಪ್ರಕಾಶ್ ಗುಪ್ತಾ, ಮಕ್ಕಳಲ್ಲಿ ವ್ಯವಹಾರದ ಜ್ಞಾನ ದೊರಕುವಲ್ಲಿ ಮಕ್ಕಳ ಸಂತೆ ಹೆಚ್ಚು ಸಹಕಾರಿ ವಸ್ತುಗಳ ಉತ್ತಮ ಗುಣಮಟ್ಟದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಮಕ್ಕಳ ಸಂತೆ ಏರ್ಪಡಿಸಲಾಗಿದೆ ಎಂದರು.
ಕಾರ್ಯದರ್ಶಿ ಜಿ.ಆರ್.ರಂಗೇಗೌಡ, ಖಜಾಂಚಿ ಕೆ.ಟಿ.ಶಿವಣ್ಣ, ಸಹಕಾರ್ಯದರ್ಶಿ ಟಿ.ಎಸ್.ಲಕ್ಷ್ಮೀನರಸಿಂಹ, ಆಡಳಿತಾಧಿಕಾರಿಗಳಾದ ನಝೀರ್ ಅಹಮದ್, ನಿರ್ದೇಶಕಿ ಟಿ.ಪಿ.ಜಯಮ್ಮ, ಮುಖ್ಯ ಶಿಕ್ಷಕರಾಧ ಎಚ್.ಆರ್.ತುಕಾರಾಮ್ ಹಾಗೂ ಓಂಕಾರ್ ಮೂರ್ತಿ ಸೇರಿದಂತೆ ಶಿಕ್ಷಕರು, ಗ್ರಾಹಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.