ADVERTISEMENT

ಎಂ.ಎನ್.ಚನ್ನಬಸಪ್ಪಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ

ಉಮಾದೇವಿ, ಶರತ್ ಕುಮಾರ್‌ಗೆ ‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 5:15 IST
Last Updated 19 ಡಿಸೆಂಬರ್ 2025, 5:15 IST
<div class="paragraphs"><p>ಎಂ.ಎನ್.ಚನ್ನಬಸಪ್ಪ</p></div>

ಎಂ.ಎನ್.ಚನ್ನಬಸಪ್ಪ

   

ತುಮಕೂರು: ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಕೊಡಮಾಡುವ ‘ಸಿದ್ಧಗಂಗಾಶ್ರೀ’ ಪ್ರಶಸ್ತಿಗೆ ಎಸ್‌ಐಟಿ ನಿರ್ದೇಶಕರಾಗಿದ್ದ ಎಂ.ಎನ್.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಶಿಕ್ಷಣ, ಆಡಳಿತ, ಮಠಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಚನ್ನಬಸಪ್ಪ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ₹1 ಲಕ್ಷ ನಗದು, ಅಭಿನಂದನಾ ಪತ್ರವನ್ನು ಒಳಗೊಂಡಿದೆ.

ADVERTISEMENT

‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿಗೆ ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮೈಸೂರಿನ ಎಸ್.ಪಿ.ಉಮಾದೇವಿ ಹಾಗೂ ತುಮಕೂರಿನ ತಜ್ಞವೈದ್ಯ ಡಾ.ಸಿ.ಶರತ್ ಕುಮಾರ್ ಆಯ್ಕೆ ಆಗಿದ್ದಾರೆ. ತಲಾ ₹25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

‘ಸಂಘಸಿರಿ’ ಪ್ರಶಸ್ತಿಗೆ ದುಗ್ಗಹಟ್ಟಿಯ ಪಿ.ವೀರಭದ್ರಪ್ಪ, ತುಮಕೂರಿನ ಎಚ್.ಬಿ.ನಂಜುಂಡಯ್ಯ, ಎಂ.ಎನ್.ದಶರಥರಾಮಯ್ಯ, ಗೆದ್ದಲಗಟ್ಟೆಯ ಎಂ.ಸಿದ್ಧಯ್ಯ, ಬೆಂಗಳೂರಿನ ಜಿ.ನಾಗಸುಂದರ್, ದಾವಣಗೆರೆ ಸಿ.ಕೆ.ಸಿದ್ಧಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಎಚ್.ಶಿವರುದ್ರಯ್ಯ ತಿಳಿಸಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಡಿ. 21ರಂದು ನಡೆಯುವ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ 69ನೇ ಸರ್ವಸದಸ್ಯರ ಮಹಾಧಿವೇಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಎಸ್‌.ಪಿ.ಉಮಾದೇವಿ
ಸಿ.ಶರತ್ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.