ತಿಪಟೂರು: ಜಿಕೆಎಂ ನಗರದಲ್ಲಿ ಟೀಮ್ ಹಲ್ಕ್ ವತಿಯಿಂದ ಮಿಸ್ಟರ್ ತಿಪಟೂರು ದೇಹದಾರ್ಢ್ಯ ಸ್ಪರ್ಧೆ ಸೋಮವಾರ ನಡೆಯಿತು.
50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.ಪ್ರಜ್ವಲ್ ಪ್ರಥಮ ಸ್ಥಾನ, ಸೈಯದ್ ದ್ವಿತೀಯ, ಭರತ್ ತೃತೀಯ ಬಹುಮಾನ ಪಡೆದರು. ಪ್ರಜ್ವಲ್‌ಗೆ ಮಿಸ್ಟರ್ ತಿಪಟೂರು 2025 ಪ್ರಶಸ್ತಿ ಪಡೆದರು.
ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಬಹು ಮುಖ್ಯ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿರಂತರ ವ್ಯಾಯಾಮ ಮುಖ್ಯವಾಗುತ್ತವೆ. ಯುವಕರು ದುಶ್ಚಟಗಳಿಗೆ ಬಿದ್ದು ಹಾಳಾಗದೆ ಸಧೃಡ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮಗಳಿಗೆ ಒತ್ತು ನೀಡಬೇಕು ಎಂದರು.
ನಿವೃತ್ತ ಎಸಿಪಿ ಲೋಕೇಶ್ವರ್, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಉಪಾಧ್ಯಕ್ಷೆ ಮೇಘನಾ ಸುಜಿತ್‌ಭೂಷಣ್, ನಿಖಿಲ್ ರಾಜಣ್ಣ, ವೈದ್ಯ ಶ್ರೀಧರ್, ರಕ್ಷಿತ್ ಗೌಡ, ಸಮ್ಮಿಉಲ್ಲಾ, ಎಂ.ಸೈಫುಲ್ಲ. ಜಿ.ಕೆ.ನಟರಾಜ್, ಮುತ್ತಾವಲ್ಲಿ ಮಹಮದ್ ದಸ್ತಗೀರ್, ಸಮೀಉಲ್ಲಾ
ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.