ತಿಪಟೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಮದೀನ ಮಸೀದಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಉಗ್ರ ಕೃತ್ಯವನ್ನು ಖಂಡಿಸಲಾಯಿತು. ಮದೀನ ಮಸೀದಿಯಲ್ಲಿ ನಮಾಜ್ ಮುಗಿಸಿದ ಮುಸ್ಲಿಮರು ಮಸೀದಿ ಮುಂಭಾಗ ಸೇರಿ ಪ್ರತಿಭಟಿಸಿದರು.
ಮದೀನ ಮಸೀದಿ ಮುಖಂಡ ಮಹಮದ್ ದಸ್ತಗಿರ್ ಮಾತನಾಡಿ, 'ಕಾಶ್ಮೀರದಲ್ಲಿ ಭಯೋತ್ಪಾದಕರ ಕೃತ್ಯವನ್ನು ಭಾರತದ ಸಮಸ್ತ ಮುಸ್ಲಿಮರು ಖಂಡಿಸುತ್ತೇವೆ, ನಮ್ಮ ತಾಯ್ನಾಡಿಗೆ, ಕೇಡುಮಾಡುವ ಉಗ್ರಗಾಮಿ ಕೃತ್ಯ ಸಹಿಸುವುದಿಲ್ಲ. ಮನುಷ್ಯತ್ವ ವಿರೋಧಿಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ಮದೀನ ಮಸೀದಿ ಉಪಾಧ್ಯಕ್ಷ ಸೈಫುಲ್ಲ ಎಂ. ಮಾತನಾಡಿ, ಪಹಲ್ಗಾಮ್ ಕೃತ್ಯ ಮನುಷ್ಯತ್ವಕ್ಕೆ ಮಾರಕವಾದ ಕೃತ್ಯ. ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಸೌಹಾರ್ದದಿಂದ ಬದುಕುತ್ತಿದ್ದೇವೆ. ಸರ್ಕಾರ ಉಗ್ರಗಾಮಿ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಮದ್ ದಸ್ತಗಿರ್, ಸೈಫುಲ್ಲ ಎಂ., ನವೀದ್ ಆಲಂ, ಮುನ್ನಾವರ್‌ಪಾಷಾ, ಖಲೀಂಸಾಬ್, ಎಚ್.ಬಿ.ಖಲೀಂಖಾನ್, ಅಜ್ಗರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.