ADVERTISEMENT

ಹುಳಿಯಾರು | ಸ್ವಚ್ಛತೆ ಇಲ್ಲದ 108 ವಾಹನ, ರೋಗಿ ಕಡೆಯವರಿಂದಲೇ ಸ್ವಚ್ಛ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 13:12 IST
Last Updated 19 ಏಪ್ರಿಲ್ 2020, 13:12 IST
108 ವಾಹನವನ್ನು ಸ್ವಚ್ಚಗೊಳಿಸುತ್ತಿರುವ ರೋಗಿ ಸಂಬಂಧಿಕರು
108 ವಾಹನವನ್ನು ಸ್ವಚ್ಚಗೊಳಿಸುತ್ತಿರುವ ರೋಗಿ ಸಂಬಂಧಿಕರು   

ಹುಳಿಯಾರು: ಹೋಬಳಿಯ ಶಿಡ್ಲಕಟ್ಟೆ ಗ್ರಾಮಕ್ಕೆ ರೋಗಿಯನ್ನು ಕರೆದೊಯ್ಯಲು ಬಂದಿದ್ದ 108 ವಾಹನ ತೀರಾ ದೂಳಿನಿಂದ ಕೂಡಿದ್ದರಿಂದ ರೋಗಿ ಕಡೆಯವರೇ ಸ್ವಚ್ಛಮಾಡಿ ರೋಗಿಯನ್ನು ಕರೆದು ಕೊಂಡು ಹೋಗ ಬೇಕಾಯಿತು.

‘ತುರ್ತು ಅಗತ್ಯದ ಮೇರೆಗೆ ಬಂದ ಆಂಬುಲೆನ್ಸ್ ವಾಹನ ದೂಳಿನಿಂದ ಕೂಡಿತ್ತು. ಅದರಲ್ಲಿ ಹತ್ತಿ ಕುಳಿತುಕೊಂಡರೆ ರೋಗಕ್ಕೆ ಆಹ್ವಾನ ನೀಡಿದಂತೆ ಎನ್ನುವ ಸ್ಥಿತಿಯಲ್ಲಿತ್ತು. ಆದ್ದರಿಂದ ನಾವೇ ಪೊರಕೆ ಹಿಡಿದು ಸ್ವಚ್ಛ ಮಾಡಿ ನಂತರ ರೋಗಿಯನ್ನು ಕರೆದೊಯ್ದೆವು’ ಎಂದು ಕುಟುಂಬದವರು ತಿಳಿಸಿದ್ದಾರೆ.

ಕೊರೊನಾ ವೈರಾಣು ಹರಡದಂತೆ ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ರೋಗಿಯನ್ನು ಕರೆದೊಯ್ಯುವ ಆಂಬುಲೆನ್ಸ್‌ನಲ್ಲಿ ಕನಿಷ್ಟ ಸ್ವಚ್ಛತೆ ಕಾಪಾಡದಿರುವುದು ಬೇಜವಾಬ್ದಾರಿತನವೇ ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.