ADVERTISEMENT

ಮಧುಗಿರಿ: ಒಂದೇ ಕಡೆ 20 ನವಿಲುಗಳು ಅನುಮಾನಾಸ್ಪದ ಸಾವು; ವಿಷಪ್ರಾಶನದ ಶಂಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 9:11 IST
Last Updated 4 ಆಗಸ್ಟ್ 2025, 9:11 IST
<div class="paragraphs"><p>ಮಧುಗಿರಿ: ಒಂದೇ ಕಡೆ 20 ನವಿಲುಗಳು ಅನುಮಾನಾಸ್ಪದ ಸಾವು– ವಿಷಪ್ರಾಶನದ ಶಂಕೆ</p></div>

ಮಧುಗಿರಿ: ಒಂದೇ ಕಡೆ 20 ನವಿಲುಗಳು ಅನುಮಾನಾಸ್ಪದ ಸಾವು– ವಿಷಪ್ರಾಶನದ ಶಂಕೆ

   

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿ ಹನುಮಂತಪುರದಲ್ಲಿ ಎರಡು ದಿನಗಳ ಹಿಂದೆ 20 ನವಿಲುಗಳು ಮೃತಪಟ್ಟಿವೆ. ಗೋಮಾಳ ಜಾಗದಲ್ಲಿ ಆ.2ರಂದು ಮೂರು ಗಂಡು, 17 ಹೆಣ್ಣು ನವಿಲುಗಳು ಮೃತಪಟ್ಟಿವೆ.

‘ಅಕ್ಕಪಕ್ಕದ ಜಮೀನುಗಳಲ್ಲಿ ಮುಸುಕಿನಜೋಳ ಬೆಳೆಯುತ್ತಾರೆ. ಬೆಳೆ ನಾಶ ಮಾಡುತ್ತವೆ ಎಂದು ಬೆಳೆಗೆ ಕೀಟನಾಶಕ ಸಿಂಪಡಿಸಿದ್ದರು. ಅವನ್ನು ತಿಂದು ಸತ್ತಿವೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ನವಿಲುಗಳ ಕಳೇಬರಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎಸಿಎಫ್ ಮಲ್ಲಿಕಾರ್ಜುನ, ವಲಯ ಅರಣ್ಯಾಧಿಕಾರಿ ಸುರೇಶ್, ಉಪ ಅರಣ್ಯ ವಲಯಾಧಿಕಾರಿ ಮುತ್ತುರಾಜು ಭೇಟಿ ನೀಡಿದ್ದರು.

ಡಿಸಿಎಫ್‌ ನೇತೃತ್ವದಲ್ಲಿ ತನಿಖೆ

ಬೆಂಗಳೂರು: ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಮಿಡಿಗೇಶಿಯ ರೈತರೊಬ್ಬರ ಜಮೀನಿನಲ್ಲಿ 19 ನವಿಲು ಗಳು ಮೃತಪಟ್ಟ ಪ್ರಕರಣದ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ನೇತೃತ್ವದ ತಂಡ ನಡೆಸಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನವಿಲುಗಳ ಸಾವಿನ ಪ್ರಕರಣ ವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾವಿಗೆ ಕೀಟನಾಶಕ ಸೇವನೆ ಕಾರಣ ಎಂಬ ಅಂಶ ಮಾಧ್ಯಮಗಳಲ್ಲಿ ವರದಿಯಾಗಿದೆ. ನವಿಲುಗಳನ್ನು ಸಾಯಿಸಲೆಂದೇ ವಿಷ ಹಾಕಲಾಗಿತ್ತೆ ಅಥವಾ ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕಯುಕ್ತ ಫಸಲು ತಿಂದು ನವಿಲುಗಳು ಮೃತಪಟ್ಟಿವೆಯೇ ಎಂಬ ಬಗ್ಗೆ ತನಿಖೆ ನಡೆಸಿ, ಐದು ದಿನಗಳಲ್ಲಿ ವರದಿ ಸಲ್ಲಿಸಲು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಮಲೆಮಹದೇಶ್ವರ ಬೆಟ್ಟ ದಲ್ಲಿ ಈಚೆಗೆ ಹುಲಿ, ಅದರ ನಾಲ್ಕು ಮರಿಗಳು ವಿಷ ಸೇವನೆಯಿಂದ ಮೃತಪಟ್ಟಿದ್ದವು. ನಂತರ ಕೋತಿ ಗಳನ್ನು ಕೊಂದು ಬಂಡೀಪುರದ ಬಳಿ ಎಸೆದಿದ್ದರು. ಯಾವುದೇ ವನ್ಯಜೀವಿ ಮೃತಪಟ್ಟರೂ ‘ಆಡಿಟ್‌’ ಮಾಡಿಸಬೇಕು, ತಕ್ಷಣ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.