ADVERTISEMENT

ತುಮಕೂರು: ಕಾರು ಡಿಕ್ಕಿಯಾಗಿ ಅಪರಿಚಿತ ಸಾವು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 6:26 IST
Last Updated 13 ಸೆಪ್ಟೆಂಬರ್ 2020, 6:26 IST

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರ ತಿಮ್ಮರಾಜನಹಳ್ಳಿ ಬಳಿ ಕಾರು ಡಿಕ್ಕಿಯಾಗಿ 65 ವರ್ಷ ವಯಸ್ಸಿನ ಅ‍ಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.

ಹೆದ್ದಾರಿ ದಾಟುವಾಗ ವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿಯಾಗಿದೆ ಎಂದು ಪ್ರಕರಣದ ಪ್ರತ್ಯಕ್ಷದರ್ಶಿ ಜಯರಾಮಯ್ಯ ಎಂಬುವರು ಕೋರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತರು ಐದೂವರೆ ಅಡಿ ಎತ್ತರ ಇದ್ದಾರೆ. ಬಿಳಿ ಬಣ್ಣದ ಚೌಕಳಿ ತುಂಬು ತೋಳಿನ ಅಂಗಿ ಸಿಮೆಂಟ್ ಬಣ್ಣದ ಕಪ್ಪು ಗೆರೆಯ ಪ್ಯಾಂಟ್ ಧರಿಸಿದ್ದಾರೆ. ಧರ್ಮಸ್ಥಳದ ಪ್ರಸಾದದ ಪ್ಯಾಕೇಟ್ ಇವರ ಬಳಿ ಇತ್ತು. ಮೃತರ ವಾರಸುದಾರರು ಇದ್ದಲ್ಲಿ ಕೋರ ಠಾಣೆ ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.