ADVERTISEMENT

ಲಿಂಕ್‌ ಕೆನಾಲ್‌: ಗ್ರಾಮೀಣ ಭಾಗದಲ್ಲೂ ಹೋರಾಟಕ್ಕೆ ಸಿದ್ಧತೆ

ತೀವ್ರತೆ ಹೆಚ್ಚಿಸಲು ನೀರಾವರಿ ಹೋರಾಟ ಸಮಿತಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 4:19 IST
Last Updated 10 ಜೂನ್ 2025, 4:19 IST
ಗುಬ್ಬಿಯಲ್ಲಿ ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು ಸಭೆ ನಡೆಯಿತು
ಗುಬ್ಬಿಯಲ್ಲಿ ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು ಸಭೆ ನಡೆಯಿತು   

ಗುಬ್ಬಿ: ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟವನ್ನು ಗ್ರಾಮೀಣ ಬಾಗಕ್ಕೂ ಕೊಂಡೊಯ್ದು ಹೋರಾಟದ ತೀವ್ರತೆ ಹೆಚ್ಚಿಸಲು ನೀರಾವರಿ ಹೋರಾಟ ಸಮಿತಿ ಪಟ್ಟಣದಲ್ಲಿ ಸೋಮವಾರ ಸಭೆ ಸೇರಿ ಚರ್ಚೆ ನಡೆಸಿತು.

ಮೇ 31ರಿಂದ ನಿಜವಾದ ಹೋರಾಟ ಪ್ರಾರಂಭವಾಗಿದೆ. ಅಪಾರ ಪ್ರಮಾಣದಲ್ಲಿ ಸೇರಿದ್ದ ಹೋರಾಟಗಾರರ ಆಕ್ರೋಶ ಕಂಡು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕೊರಟಗೆರೆ, ಮಧುಗಿರಿ, ಶಿರಾ ಭಾಗದ ರೈತರು ಲಿಂಕ್ ಕೆನಾಲ್‌ ವಿರೋಧಿಸಿ ಧ್ವನಿ ಎತ್ತುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕೇಂದ್ರ ಸಚಿವ ವಿ.ಸೋಮಣ್ಣ ಹೋರಾಟದಲ್ಲಿ ಭಾಗಿಯಾಗಿದ್ದರೆ ಹೋರಾಟಕ್ಕೆ ಹೆಚ್ಚಿನ ಶಕ್ತಿ ಬರಲು ಸಾಧ್ಯವಾಗುತ್ತಿತ್ತು. ಮೇ 31ರ ಹೋರಾಟದ ಕಿಚ್ಚನ್ನು ಕಂಡ ಕೇಂದ್ರ ಸಚಿವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸ್ಥಳ ಪರಿಶೀಲನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಇದರಿಂದ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಹೆಚ್ಚಿನ ಬಲ ಬರಲು ಸಾಧ್ಯ ಎಂದು ಹೇಳಿದರು.

ADVERTISEMENT

ಶಾಸಕ ಎಸ್.ಆರ್. ಶ್ರೀನಿವಾಸ್ ಹೋರಾಟಕ್ಕೆ ಮುಂದಾದಲ್ಲಿ ಅವರ ನೇತೃತ್ವದಲ್ಲಿಯೇ ಹೋರಾಟ ನಡೆಸಲು ಸಿದ್ಧ. ತಾಲ್ಲೂಕಿನ ಜನರ ಹಿತ ಕಾಪಾಡಬೇಕಿರುವ ಶಾಸಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ನೀರಾವರಿ ಹೋರಾಟ ನಿರಂತರವಾಗಿದ್ದು, ಪಂಚಾಯಿತಿ ಮಟ್ಟದಲ್ಲಿಯೂ ಸಭೆ ನಡೆಸಿ ರೈತರನ್ನು ಎಚ್ಚರಿಸಬೇಕಿದೆ. ಈಗ ಮರೆತು ಮಲಗಿದ್ದಲ್ಲಿ ಮುಂದೆ ಸಂಕಷ್ಟ‌ ಎದುರಿಸಬೇಕಾಗುತ್ತದೆ. ಹೋರಾಟಗಾರರ ಮೇಲೆ ಸರ್ಕಾರ ಎಷ್ಟೇ ದಾವೆಗಳನ್ನು ಹಾಕಿದರೂ ಅದಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಪ್ರಸ್ತುತ ಇರುವ ನಾಲೆಯನ್ನು ಆಧುನಿಕರಣಗೊಳಿಸಿ ಕುಣಿಗಲ್ ಭಾಗಕ್ಕೆ ನೀರು ತೆಗೆದುಕೊಂಡು ಹೋಗಲು ಯಾವುದೇ ತಕರಾರು ಇಲ್ಲ. ಒಂದು ವೇಳೆ ರಾಮನಗರ ಭಾಗಕ್ಕೆ ನೀರು ತೆಗೆದುಕೊಂಡು ಹೋದಲ್ಲಿ ಕುಣಿಗಲ್ ತಾಲ್ಲೂಕಿನವರಿಗೂ ಅನ್ಯಾಯವಾಗುವುದು ಎನ್ನುವ ಎಚ್ಚರಿಕೆ ಮೂಡಿಸಬೇಕಿದೆ ಎಂದರು.

ಸುಂಕಾಪುರದ ಬಳಿ ಈಗಲೂ ಪೊಲೀಸರು ಕಾವಲು ಕಾಯುತ್ತಿರುವುದನ್ನು ನೋಡಿದರೆ ಸರ್ಕಾರ ಮತ್ತೆ ಕಾಮಗಾರಿ ಆರಂಭಿಸುವ ಲಕ್ಷಣಗಳು ಕಂಡುಬರುತ್ತಿವೆ. ನಿರಂತರ ಹೋರಾಟ ಮುಂದುವರೆಸಿದಲ್ಲಿ ಮಾತ್ರ ಕಾಮಗಾರಿಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರೈತರ ಹೋರಾಟದ ಜೊತೆಗೆ ಕಾನೂನು ಹೋರಾಟಕ್ಕೂ ಸಜ್ಜಾಗುತ್ತಿದೆ. ಜಿಲ್ಲೆಯ ರೈತರು ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಬಹುದು ಎಂಬ ಭಯದಿಂದಲೇ ಸರ್ಕಾರ ಈಗಾಗಲೇ ಕೆವಿಯೆಟ್ ಅರ್ಜಿ ಸಲ್ಲಿಸಿದೆ ಎಂದರು.

ತಾಲ್ಲೂಕು ವಕೀಲರ ಸಂಘದ ಸದಸ್ಯರು ಹೇಮಾವತಿ ಲಿಂಕ್ ಕೆನಾಲ್ ಹೋರಾಟಕ್ಕೆ ಸಂಬಂಧಿಸಿದ ಎಲ್ಲಾ ದಾವೆಗಳನ್ನು ಉಚಿತವಾಗಿ ನಡೆಸಿಕೊಡಲು ಸಿದ್ಧವಿದ್ದಾರೆ. ಇದರಿಂದ ಪೊಲೀಸರು ಹಾಕುವ ಯಾವುದೇ ಪ್ರಕರಣಗಳಿಗೆ ಹೆದರುವ ಅಗತ್ಯ ಇಲ್ಲ ಎಂದು ಹೇಳಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್ ಹಾಗೂ ಎಸ್‌.ಡಿ. ದಿಲೀಪ್ ಕುಮಾರ್, ಬಿ.ಎಸ್. ನಾಗರಾಜು, ಬೆಟ್ಟಸ್ವಾಮಿ, ಚಂದ್ರಶೇಖರ್ ಬಾಬು, ಕಳ್ಳಿಪಾಳ್ಯ ಲೋಕೇಶ್, ಹೊನ್ನಗಿರಿ ಗೌಡ, ಪಂಚಾಕ್ಷರಿ, ಬ್ಯಾಟರಂಗೇಗೌಡ, ಶಿವಕುಮಾರ್, ಯೋಗಾನಂದ್, ಭೈರಪ್ಪ, ಸುರೇಶ ಗೌಡ, ಶಂಕರ್ ಕುಮಾರ್, ರೈತ ಸಂಘದ ಶಿವಕುಮಾರ್, ಮಂಜುನಾಥ್, ರೈತರು, ಸಾರ್ವಜನಿಕರು ಭಾಗವಹಿಸಿದ್ದರು.

ಗುಬ್ಬಿಯಲ್ಲಿ ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು ಸಭೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.