ADVERTISEMENT

ಕೊರಟಗೆರೆ: ಬೆಲೆ ಏರಿಕೆ ನಡುವೆ ಕುಗ್ಗದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:25 IST
Last Updated 8 ಆಗಸ್ಟ್ 2025, 5:25 IST
ಕೊರಟಗೆರೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಗುರುವಾರ ಹೂವು, ಹಣ್ಣು ಖರೀದಿಸಲಾಯಿತು 
ಕೊರಟಗೆರೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಗುರುವಾರ ಹೂವು, ಹಣ್ಣು ಖರೀದಿಸಲಾಯಿತು    

ಕೊರಟಗೆರೆ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗುರುವಾರ ಪಟ್ಟಣದ ಮಾರುಕಟ್ಟೆಗಳಲ್ಲಿ ವ್ಯಾಪಕ ಖರೀದಿ ಚಟುವಟಿಕೆಗಳು ನಡೆದವು.

ಹೂವು, ಹಣ್ಣು, ಬಳೆ, ಅಲಂಕಾರ ಸಾಮಗ್ರಿ, ಪೂಜಾ ಹಾಗೂ ದಿನಸಿ ವಸ್ತುಗಳನ್ನು ಖರೀದಿಸಿದರು.

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ, ಕರ್ನಾಟಕ ಬ್ಯಾಂಕ್ ಮುಂಭಾಗ ಬೆಳಿಗ್ಗೆಯೇ ಮಾರುಕಟ್ಟೆ ಪ್ರವೇಶಿಸಿದ ಮಹಿಳೆಯರು, ಹೂವು, ಹಣ್ಣು ಮತ್ತು ಗೃಹಾಲಂಕಾರ ಸಾಮಗ್ರಿಗಳನ್ನು ಆಯ್ಕೆಮಾಡುವಲ್ಲಿ ನಿರತರಾಗಿದ್ದರು. ಮಲ್ಲಿಗೆ, ಕನಕಾಂಬರಿ, ಆಕರ್ಷಕ ಹೂಮಾಲೆಗಳಿಗೆ ಬೇಡಿಕೆ ಹೆಚ್ಚಿತ್ತು. ಬಳೆ, ಬಾಗಿನದ ವಸ್ತು, ಎಲೆ, ತಾಂಬೂಲಗಳ ಮಾರಾಟ ಚುರುಕಾಗಿತ್ತು.

ADVERTISEMENT

ಹಬ್ಬಕ್ಕೆ ಅಗತ್ಯವಿರುವ ಅಕ್ಕಿ, ಬೆಲ್ಲ, ತುಪ್ಪ, ಒಣಕಾಯಿ, ದಿನಸಿ ಸಾಮಗ್ರಿ, ಮಾವಿನ ಎಲೆ ಮುಂತಾದ ವಸ್ತುಗಳ ಖರೀದಿಗೆ ಗ್ರಾಹಕರು ಅಂಗಡಿಗಳಲ್ಲಿ ಮುಗಿಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.