ತುಮಕೂರು: ಸಚಿವ ಜಿ.ಪರಮೇಶ್ವರ ಅವರನ್ನು ತೇಜೋವಧೆ ಮಾಡಿರುವ ಶಾಸಕ ಬಿ.ಸುರೇಶ್‌ಗೌಡ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಕ್ಷಮೆ ಕೇಳಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಲ್ಲಿ ಶನಿವಾರ ಆಗ್ರಹಿಸಿದರು.
ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಈವರೆಗೂ ಯಾವುದೇ ರೀತಿಯಲ್ಲೂ ಗಲಭೆಗಳಾಗಿಲ್ಲ. ಇಂತಹ ಸುಸಂಸ್ಕೃತ ಕ್ಷೇತ್ರ ಪ್ರತಿನಿಧಿಸುವ ಶಾಸಕರು, ಕ್ಷೇತ್ರದ ಮರ್ಯಾದೆ ತೆಗೆಯುವ ಕೆಲಸ ಮಾಡಬಾರದು. ಗೌರವ ಉಳಿಸಿಕೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಸಲಹೆ ಮಾಡಿದರು.
ವೈಯಕ್ತಿಕ ಆರೋಪ, ಸೇಡಿನ ರಾಜಕಾರಣ ಬಿಡಬೇಕು. ಶಾಸಕ ಸುರೇಶ್‌ಗೌಡ ಅವರಿಗೆ ತಾಳ್ಮೆ ಇರಬೇಕು. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಯಾರಿಗೂ ನೋವಾಗದಂತೆ, ತೇಜೋವಧೆ ಮಾಡುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಇಬ್ಬರೂ ನಾಯಕರಿಗೆ ಕಿವಿಮಾತು ಹೇಳಿದರು.
‘ಎಲ್ಲರೂ ಹೊಂದಾಣಿಕೆ ರಾಜಕಾರಣಿಗಳೇ. ಹೊಂದಾಣಿಕೆ ಮಾಡಿಕೊಳ್ಳದ ರಾಜಕಾರಣಿಗಳು ಯಾರಿದ್ದಾರೆ? ಸುರೇಶ್‌ಗೌಡ, ಗೌರಿಶಂಕರ್ ಗೆಲುವಿಗೆ ಸಹಾಯ ಮಾಡಿದ್ದೇನೆ. ಉಪಕಾರಕ್ಕೆ ಪ್ರತ್ಯುಪಕಾರ ಮಾಡಿರುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.