
ಶಿರಾ: ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡದೆ ಈಡಿಗರ ಕುಲ ಕಸುಬಾದ ಸೇಂದಿ ಮಾರಾಟವನ್ನು ನಿಷೇಧಿಸಿರುವುದು ಅನ್ಯಾಯ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಖಂಡಿಸಿದರು. ಇದನ್ನು ಮತ್ತೆ ಮುಂದುವರಿಸಲು ಅವಕಾಶ ನೀಡುವಂತೆ ಒತ್ತಾಯಿಸಲು ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದರು.
ಚಿತ್ತಾಪುರ ತಾಲೂಕಿನ ಕರಗಲ್ಲು ಗ್ರಾಮದಿಂದ ಬೆಂಗಳೂರಿನವರೆಗೆ ಸುಮಾರು 700 ಕಿ.ಮೀ ಪಾದಯಾತ್ರೆ ನಡೆಸಿ ಗುರುವಾರ ಶಿರಾಕ್ಕೆ ಆಗಮಿಸಿದ ಸ್ವಾಮೀಜಿ, ಈಡಿಗ ಸಮುದಾಯದ ಜಾಗೃತಿ ಸಭೆಯಲ್ಲಿ ಮಾತನಾಡಿದರು.
‘ಸೇಂದಿಯನ್ನು ಅಮಲು ಪಾನೀಯ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಇದು ಆಯುರ್ವೇದದ ಪ್ರಕಾರ ಔಷಧೀಯ ಗುಣಗಳನ್ನು ಹೊಂದಿರುವ ಆರೋಗ್ಯ ಪಾನೀಯ. ಈ ಕುಲಕಸುಬನ್ನು ಮತ್ತೆ ಸ್ಥಾಪಿಸುವಂತೆ ಕೇಳಿಕೊಳ್ಳುತ್ತೇವೆ ಮತ್ತು ಈ ನಿಟ್ಟಿನಲ್ಲಿ ಕಾನೂನು ತಜ್ಞರೊಂದಿಗೆ ಚರ್ಚಿಸಿ ನ್ಯಾಯಾಲಯದ ಮೊರೆಗೆ ಹೋಗಲು ಸಿದ್ಧತೆ ನಡೆಸಲಾಗಿದೆ’ ಎಂದರು.
ಈಡಿಗ ಸಮುದಾಯದಲ್ಲಿ ಕೆಲವರು ಶ್ರೀಮಂತರಿದ್ದಾರೆ. ಅನ್ಯಾಯವಾದಾಗ ಸರ್ಕಾರದ ಮೇಲೆ ಹೋರಾಟ ನಡೆಸದೆ ತಮಗೆ ತೊಂದರೆಯಾಗುವ ಭಯದಿಂದ ಸಮುದಾಯದ ಹಿತವನ್ನು ಬಲಿ ಕೊಡುತ್ತಿದ್ದಾರೆ ಎಂದು ಟೀಕಿಸಿದರು.
ಸಮುದಾಯದ ಹಿತಕ್ಕಾಗಿಯೇ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಇದರ ಮೂಲಕ ಸಮುದಾಯವನ್ನು ಸಂಘಟಿಸಿ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಈ ಹೋರಾಟ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡುತ್ತದೆ. ಪರಿಶಿಷ್ಟ ಪಂಗಡ ಸ್ಥಾನಮಾನ ದೊರೆತರೆ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದರು.
ಶಿರಾದಿಂದ ಮುಂದುವರಿದ ಪಾದಯಾತ್ರೆಯಲ್ಲಿ ಸುಮಂಗಲಿಯರು ಪೂರ್ಣ ಕುಂಭಕಳಸಗಳನ್ನು ಹೊತ್ತು ಸಾಗಿದರು. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಡೆಯಿತು. ಸಮುದಾಯದ ಹಲವರು ಭಾಗವಹಿಸಿ ಪಾದಯಾತ್ರೆಗೆ ಮೆರುಗು ತಂದರು.
'ನಮ್ಮ ಹಕ್ಕು ನಮಗೆ ಬೇಕು' ಸೇರಿದಂತೆ ಘೋಷಣೆಗಳೊಂದಿಗೆ ಪಾದಯಾತ್ರೆ ಸಾಗಿತು. ರಾತ್ರಿ ದೊಡ್ಡ ಆಲದ ಮರದ ಕೆಳಗೆ ತಂಗಿದ ಪಾದಯಾತ್ರೆ ಶುಕ್ರವಾರ ತುಮಕೂರು ತಾಲ್ಲೂಕು ಪ್ರವೇಶಿಸಲಿದೆ.
ಪಾದಯಾತ್ರೆ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಆರ್.ಉಗ್ರೇಶ್, ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಮುಖ್ಯ ಸಂಚಾಲಕ ಲಕ್ಷ್ಮೀನರಸಯ್ಯ, ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯ ಕಾರ್ಯದರ್ಶಿ ಹನುಮಂತರಾಜು, ಜಿಲ್ಲಾ ಅಧ್ಯಕ್ಷ ಎ.ಸುರೇಶ್ (ಅಪ್ಪಿ ಮಾಸ್ಟರ್), ತಾಲ್ಲೂಕು ಅಧ್ಯಕ್ಷ ಅಜ್ಜೇನಹಳ್ಳಿ ರಮೇಶ್, ವೆಂಕಟಶ್ವಾಮಯ್ಯ, ಎವಿಸಿ ರಾಜಣ್ಣ, ಶ್ರೀನಿವಾಸ್, ಚಲಪತಿ, ಚಿಕ್ಕನಾಯಕನಹಳ್ಳಿ ತಾಲೂಕು ಉಪಾಧ್ಯಕ್ಷ ವೆಂಕಟೇಶ್, ರೇಣುಕಾಂಭ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮಲ್ಲಿಕಾರ್ಜುನ್, ಬಾಲರಾಜು, ಹನುಮಂತಣ್ಣ, ಬಸವರಾಜು, ಶೇಷಾದ್ರಿ ಇತರರು ಉಪಸ್ಥಿತರಿದ್ದರು.
ಶಿರಾ: ಸರ್ಕಾರ ಈಡಿಗರ ಕುಲಕಸುಬಾದ ಸೇಂದಿ ಮಾರಾಟವನ್ನು ಪರ್ಯಾಯ ವ್ಯವಸ್ಥೆ ಮಾಡದೆ ನಿಷೇಧಿಸಿದ್ದು ಮತ್ತೇ ಕುಲಕಸುಬಾದ ಸೇಂದಿ ಮಾರಾಟವನ್ನು ಮುಂದುವರೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಕಾನೂನು ಹೋರಾಟ ನಡೆಸುವುದಾಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಈಡಿಗ ಜನಾಂಗದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಣವಾನಂದ ಸ್ವಾಮೀಜಿ ಅವರು ಚಿತ್ತಾಪುರ ತಾಲ್ಲೂಕಿನ ಕರಗಲ್ಲು ಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರುವರೆಗೆ ಸುಮಾರು 700 ಕಿ.ಮೀ ಪಾದಯಾತ್ರೆ ಶಿರಾಕ್ಕೆ ಆಗಮಿಸದ ಸಮಯದಲ್ಲಿ ಗುರುವಾರ ಈಡಿಗ ಜನಾಂಗದ ಜಾಗೃತಿ ಸಭೆ ನಡೆಸಿ ಮಾತನಾಡಿದರು. ಸೇಂದಿ ಅಮಲು ಪಾನೀಯ ಎಂದು ಅಪಪ್ರಚಾರ ನಡೆಸಲಾಗುತ್ತಿದೆ, ಆದರೆ ಆಯುರ್ವೇದದ ಪ್ರಕಾರ ಸೇಂದಿ ಔಷಧಿಯ ಗುಣಗಳನ್ನು ಹೊಂದಿದ್ದು ಆರೋಗ್ಯ ಪಾನೀಯವಾಗಿದೆ. ಇದನ್ನು ಮತ್ತೇ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ನ್ಯಾಯಾಲಯಕ್ಕೆ ಹೋಗಲು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ ಎಂದರು.
ಈಡಿಗ ಜನಾಂಗದಲ್ಲಿ ಬೆರಳೆಣಿಕೆಯಷ್ಟು ಶ್ರೀಮಂತರಿದ್ದಾರೆ. ಜನಾಂಗದ ಚುಕ್ಕಾಣಿ ಹಿಡಿದ ಶ್ರೀಮಂತ ಮುಖಂಡರು ಜನಾಂಗಕ್ಕೆ ಅನ್ಯಾಯವಾದ ಸಮಯದಲ್ಲಿ ಸರ್ಕಾರದ ಮೇಲೆ ಹೋರಾಟ ನಡೆಸದೆ ಜನಾಂಗದ ಹಿತ ಬಲಿ ಕೊಡುತ್ತಿದ್ದಾರೆ. ಹೋರಾಟಕ್ಕೆ ಮುಂದಾದರೆ ತಮಗೆ ತೊಂದರೆಯಾಗುವುದು ಎನ್ನುವ ಭಯ ಜನಾಂಗದ ಮುಂಚೂಣಿ ನಾಯಕರಲ್ಲಿದೆ ಎಂದರು.
ಜನಾಂಗದ ಹಿತಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾನೆ. ಈ ಮೂಲಕ ಜನಾಂಗವನ್ನು ಸಂಘಟಿಸಿ ತಮ್ಮ ಹಕ್ಕುಗಳನ್ನು ಪಡೆಯಲಾಗುವುದು. ನಮ್ಮ ಹೋರಾಟದಿಂದ ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾದರೆ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಅನುಕೂಲವಾಗುವುದು ಎಂದರು.
ಪಾದಯಾತ್ರೆ: ಶಿರಾದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಸುಮಂಗಲಿಯರು ಪೂರ್ಣಕುಂಬಕಳಸಗಳನ್ನು ಹೊತ್ತು ಸಾಗಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಾದಯಾತ್ರೆಗೆ ಮೆರುಗು ತಂದರು. ಜನಾಂಗದ ಹಿತ ಕಾಪಾಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆ ಮುಂದೆ ಸಾಗಿತು. ರಾತ್ರಿ ದೊಡ್ಡ ಆಲದಮರದಲ್ಲಿ ತಂಗಲಿರುವ ಪಾದಯಾತ್ರೆ ಶುಕ್ರವಾರ ತುಮಕೂರು ತಾಲ್ಲೂಕು ಪ್ರವೇಶಿಸಲಿದೆ.
ಮುಖಂಡರ ಬೆಂಬಲ: ಪ್ರಣವಾನಂದ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಆರ್.ಉಗ್ರೇಶ್, ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿ ಈಡಿಗರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಪಾದಯಾತ್ರೆ ಸಮಿತಿಯ ಮುಖ್ಯ ಸಂಚಾಲಕ ಲಕ್ಷ್ಮೀನರಸಯ್ಯ, ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯ ಕಾರ್ಯದರ್ಶಿ ಹನುಮಂತರಾಜು, ಜಿಲ್ಲಾಧ್ಯಕ್ಷ ಎ.ಸುರೇಶ್ (ಅಪ್ಪಿ ಮಾಸ್ಟರ್), ತಾಲ್ಲೂಕು ಅಧ್ಯಕ್ಷ ಅಜ್ಜೇನಹಳ್ಳಿ ರಮೇಶ್, ವೆಂಕಟಶ್ವಾಮಯ್ಯ, ಎವಿಸಿ ರಾಜಣ್ಣ, ಶ್ರೀನಿವಾಸ್, ಚಲಪತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಉಪಾಧ್ಯಕ್ಷ ವೆಂಕಟೇಶ್, ರೇಣುಕಾಂಭ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮಲ್ಲಿಕಾರ್ಜುನ್, ಬಾಲರಾಜು, ಹನುಮಂತಣ್ಣ, ಬಸವರಾಜು, ಶೇಷಾದ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.