ADVERTISEMENT

ಶಿವಕುಮಾರ ಸ್ವಾಮೀಜಿ ಜಯಂತಿ: ಮಗುವಿಗೆ 'ಶಿವಮಣಿ' ಎಂದು ಹೆಸರಿಟ್ಟ ಮುಸ್ಲಿಂ ದಂಪತಿ

'ನಮಗೆ ಹಿಂದೂಗಳ ಹಾಗೆ ಇರಲು ಇಷ್ಟ'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 7:16 IST
Last Updated 1 ಏಪ್ರಿಲ್ 2022, 7:16 IST
ಶಿವಮಣಿ ಎಂದು ನಾಮಕರಣ ಮಾಡಿದ ಮಗು
ಶಿವಮಣಿ ಎಂದು ನಾಮಕರಣ ಮಾಡಿದ ಮಗು   

ತುಮಕೂರು:ಮುಸ್ಲಿಂ ಮಗುವಿಗೆ 'ಶಿವಮಣಿ' ಎಂದು ಹೆಸರಿಡುವ ಮೂಲಕ ಸಿದ್ಧಗಂಗಾ ಮಠದಲ್ಲಿ ಸೌಹಾರ್ದ ಸಾರಲಾಯಿತು.

ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ನಡೆದ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಕ್ಯಾತ್ಸಂದ್ರ ನಿವಾಸಿ ಶಾಹಿಸ್ತಾ ಮತ್ತು ಜಮೀರ್ ದಂಪತಿಯ ಮಗುವಿಗೆ ಶಿವಮಣಿ ಎಂದು ನಾಮಕರಣ ಮಾಡಲಾಯಿತು.

ನಮಗೆ ಹಿಂದೂಗಳ ಹಾಗೆ ಇರಲು ಇಷ್ಟ ಹಾಗಾಗಿ ಮಠದ ಆವರಣದಲ್ಲಿ ಸ್ವಾಮೀಜಿಯ ಹೆಸರು ಇಡಲಾಗಿದೆ. ಶಿವಕುಮಾರ ಸ್ವಾಮೀಜಿ ನಡೆದಾಡಿದ ಸ್ಥಳದಲ್ಲಿ ನಮ್ಮ ಮಗುವಿಗೆ ನಾಮಕರಣ ಮಾಡುತ್ತಿರುವುದು ತುಂಬಾ ಖುಷಿ ನೀಡುತ್ತಿದೆ ಎಂದು ಶಾಹಿಸ್ತಾ ಹೇಳಿದರು.

ಸ್ವಾಮೀಜಿಯ ವಿಚಾರಗಳು ನಮಗೆಲ್ಲಾ ಮಾದರಿ. ಸಮಾನತೆಯ ಸಂದೇಶ ಸಾರಿದ್ದರು. ಸಹಭಾಳ್ವೆ ನಡೆಸಲು ಸ್ವಾಮೀಜಿಯ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.