ADVERTISEMENT

ಕೊರೊನಾ ಸೋಂಕಿತರು | ಎಲ್ಲ ಅವರೇ, ಏನ್ ಮಾಡುವುದು: ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 14:02 IST
Last Updated 14 ಜುಲೈ 2020, 14:02 IST
ಸೋಮಣ್ಣ
ಸೋಮಣ್ಣ   

ತುಮಕೂರು: ಕೊರೊನಾ ಸೋಂಕಿತರ ಕುರಿತು ನಗರದ ಸಿದ್ಧಗಂಗಾ ಮಠದಲ್ಲಿ ವಸತಿ ಸಚಿವ ವಿ.ಸೋಮಣ್ಣ ಆಡಿರುವ ಮಾತುಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಸಿದ್ಧಲಿಂಗ ಸ್ವಾಮೀಜಿ ಹಾಗೂ ಗಣ್ಯರ ಸಮ್ಮುಖದಲ್ಲಿ ಅನೌಪಚಾರಿಕವಾಗಿ ಮಾತನಾಡುವಾಗ ಸೋಮಣ್ಣ, ‘ಬೆಂಗಳೂರಿನ 53 ವಾರ್ಡ್‌ಗಳಲ್ಲಿ 26 ಕಡೆ ಕೋವಿಡ್ ಆಸ್ಪತ್ರೆ ತೆರೆದಿದ್ದೇವೆ. ಸಹಾಯವಾಣಿ, ಆಂಬುಲೆನ್ಸ್ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲಾಗಿದೆ’ ಎಂದಿದ್ದಾರೆ.

‘ಎಲ್ಲ ಅವರೇ, ಏನ್ ಮಾಡುವುದು. ಎಲ್ಲಿ ನೋಡಿದರೂ ಗಿಜಿಗಿಜಿ ಅಂತಾರೆ. ಏನೂ ಮಾಡುವುದಕ್ಕೆ ಆಗಲ್ಲ’ ಎಂದಿದ್ದಾರೆ. ಈ ಮಾತಿಗೆ ಮಾಜಿ ಸಚಿವ ಬಿಜೆಪಿಯ ಎಸ್‌.ಶಿವಣ್ಣ ‘ಕುರಿ ಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ. ಎಲ್ಲಿ ನೋಡಿದ್ರೂ ಅವರೆ’ ಎಂದು ಧ್ವನಿಗೂಡಿಸಿದ್ದಾರೆ.

ADVERTISEMENT

ಸೋಮಣ್ಣ ಮುಸ್ಲಿಂ ಸಮುದಾಯವನ್ನು ಕುರಿತು ಈ ರೀತಿ ಹೇಳಿದ್ದಾರೆ ಎಂದು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.