ADVERTISEMENT

ದು.ಸರಸ್ವತಿ ಸೇರಿ ಮೂವರಿಗೆ ಸೂಲಗಿತ್ತಿ ನರಸಮ್ಮ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 23:10 IST
Last Updated 21 ಡಿಸೆಂಬರ್ 2025, 23:10 IST
   

ತುಮಕೂರು: ಸೂಲಗಿತ್ತಿ ನರಸಮ್ಮ ಹೆಸರಿನಲ್ಲಿ ಕೊಡಮಾಡುವ ‘ಸೂಲಗಿತ್ತಿ ನರಸಮ್ಮ ಸೇವಾಪ್ರಶಸ್ತಿ’ಗೆ ಹೋರಾಟಗಾರ್ತಿ ದು.ಸರಸ್ವತಿ, ಲೇಖಕಿ ಶೈಲಾ ನಾಗರಾಜು, ಸಮಾಜ ಸೇವಕ ಬಿ.ಮಹದೇವ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹10 ಸಾವಿರ ನಗದು ಬಹುಮಾನ, ನೆನಪಿನ ಫಲಕ ಒಳಗೊಂಡಿದೆ. ನಗರದಲ್ಲಿ ಡಿ. 25ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT