ADVERTISEMENT

ಕಾಲ್ತುಳಿತ: ತಿಪಟೂರಿನಲ್ಲಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:29 IST
Last Updated 16 ಜೂನ್ 2025, 14:29 IST
ಬಿಜೆಪಿಯಿಂದ ನಡೆದ ಪ್ರತಿಭಟನೆ 
ಬಿಜೆಪಿಯಿಂದ ನಡೆದ ಪ್ರತಿಭಟನೆ    

ತಿಪಟೂರು: ‘ಆರ್‌ಸಿಬಿ ವಿಜಯೋತ್ಸವ ಸಂದರ್ಭ ಕಾಲ್ತುಳಿತ ಸಂಭವಿಸಿ ಸಾವಿಗೆ ಕಾರಣವಾಗಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ತಾಲ್ಲೂಕು ಬಿಜೆಪಿ ಘಟಕದಿಂದ ಸಿಂಗ್ರೀ ನಂಜಪ್ಪ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆ ತರಾತುರಿಯಲ್ಲಿ ವಿಜಯೋತ್ಸವ ಆಯೋಜನೆ ಬೇಡ ಎಂಬ ಮಾಹಿತಿ ನೀಡಿದರೂ ಸಹ ಸರ್ಕಾರ ಕಾರ್ಯಕ್ರಮ ಆಯೋಜಿಸಿ ಜನರ ಸಾವಿಗೆ ಕಾರಣವಾಗಿದೆ. ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ ಈ ಮೂರು ಸಂಸ್ಥೆಗಳು ಸಿಒಡಿ ಮುಂದೆ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣವೆಂದು ಲಿಖಿತ ಹೇಳಿಕೆ ಕೊಟ್ಟಿರುವುದರಿಂದ ತಕ್ಷಣವೇ ರಾಜಿನಾಮೆ ನೀಡಬೇಕು. ತನಿಖೆ ಪಾರದರ್ಶಕವಾಗಿ ನಡೆಯಬೇಕಾಗಿದ್ದು ಸಿಬಿಐ ತನಿಖೆಗೆ ಆಗಬೇಕೆಂದು ಆಗ್ರಹಿಸಿದರು.

ಸುರೇಶ್ ಬಳ್ಳೇಕಟ್ಟೆ ಮಾತನಾಡಿ, ಗುಬ್ಬಿ ಕೆನಾಲ್ ನೀರಾವರಿ ವಿಚಾರದಲ್ಲಿ ಸ್ವಾಮೀಜಿಗಳ ಮೇಲೆ ಪ್ರಕರಣ ದಾಖಲು ಮಾಡಿದ್ದು, ಪ್ರಕರಣ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ಜಗದೀಶ್, ಸತೀಶ್, ಗುಲಾಬಿ ಸುರೇಶ್, ಗಂಗಾಧರ್ ಹರಿಸಮುದ್ರ, ಬಿಸಲೇಹಳ್ಳಿ ಜಗದೀಶ್, ವಿಶ್ವದೀಪು, ಕರಡಿ ದೇವರಾಜು, ಬಸವನಹಳ್ಳಿ ಬಸವರಾಜು, ಸಂದ್ಯಾಕಿರಣ್, ಜಯಲಕ್ಷ್ಮಿ, ಸಂಗಮೇಶ್, ಪ್ರಸನ್ನಕುಮಾರ್, ತರಕಾರಿ ಗಂಗಾಧರ್, ಬಸವರಾಜು, ಸೂಗೂರು ದೀಲೀಪ್, ದತ್ತಣ್ಣ ಹಾಜರಿದ್ದರು.

ನಗರದ ಸಿಂಗ್ರೀ ನಂಜಪ್ಪ ವೃತ್ತದ ಬಳಿ ತಾ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.