ತಿಪಟೂರು: ಅಪಘಾತಕ್ಕೆ ತುತ್ತಾಗಿ ಎಂಟು ದಿನ ಸಾವು–ಬದುಕಿನ ಮಧ್ಯೆ ಹೋರಾಟ ಮಾಡಿ ಭಾನುವಾರ ಮೃತಪಟ್ಟ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿನಿ ಚಂದನ.ವಿ (13) ಅಂಗಾಗ ದಾನ ಮಾಡಲಾಯಿತು.
7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಚಂದನ, ಜುಲೈ 23ರಂದು ಸಂಜೆ ರಸ್ತೆ ದಾಟುವಾಗ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ವತ್ರೆಗೆ ದಾಖಾಲು ಮಾಡಲಾಗಿತ್ತು.
ಹೆಚ್ಚುವರಿ ಚಿಕಿತ್ಸೆಗೆ ಹಾಸನದ ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಐದು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯೆಗೊಂಡಿದೆ ಎಂದು ವೈದ್ಯರು ಖಚಿತಪಡಿಸಿದ ನಂತರ ತಂದೆ ವಸಂತ್‌ಕುಮಾರ್, ತಾಯಿ ದಿವ್ಯ ಅಂಗಾಗ ದಾನ ಮಾಡಲು ಹಾಸನ ಜಿಲ್ಲಾ ವೈದ್ಯಕೀಯ ಆಸ್ವತ್ರೆಗೆ ಒಪ್ಪಿಗೆ ಸೂಚಿಸಿದ್ದರು.
ವಿದ್ಯಾರ್ಥಿನಿಯ ಕಣ್ಣು, ಹೃದಯ, ಕಿಡ್ನಿ, ಕರಳು ದಾನ ಮಾಡಲಾಗಿದೆ. ಸರ್ಕಾರಿ ಗೌರವದೊಂದಿಗೆ ಮೆರವಣಿಗೆ ಮೂಲಕ ಮೃತದೇಹ ಮೆರವಣಿಗೆ ನಡೆಯಿತು. ಶಾಲೆಗೆ ರಜೆ ಘೋಷಿಸಿಲಾಗಿತ್ತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ, ತಾಲ್ಲೂಕು ದಂಡಾಧಿಕಾರಿ ಪವನ್‌ಕುಮಾರ್, ಡಿವೈಎಸ್ಪಿ ವಿನಾಯಕ ಶೆಟಿಗೆರೆ, ಇಒ ಸುದರ್ಶನ್, ನಗರಸಭೆ ಆಯುಕ್ತ ವಿಶ್ವೇಶ್ವರಯ್ಯ ಬದರಗಡೆ, ಬಿಜೆಪಿ ಮುಖಂಡ ಲೋಕೇಶ್ವರ್, ಡಾ.ಶ್ರೀಧರ್, ಡಾ.ವಿವೇಚನ್, ಶಾಲಾ ವ್ಯವಸ್ಥಾಪಕ ಡಾ.ಕೇಶವಕುಮಾರ್, ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು, ತರಕಾರಿ ಪ್ರಕಾಶ್, ಶಾಲಾ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಮಕ್ಕಳನ್ನು ಶಾಲೆಗೆ ಕಳಿಸುವಾಗ ಸುರಕ್ಷಿತ ವ್ಯವಸ್ಥೆಯೊಂದಿಗೆ ಕಳುಹಿಸಬೇಕು. ಮುಂದಿನ ದಿನಗಳಲ್ಲಿ ಸಂಚಾರ ಜಾಗೃತಿ ಬಗ್ಗೆ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎನ್ನುತ್ತಾರೆ ಕುಮಾರ್ ಆಸ್ವತ್ರೆ ವೈದ್ಯ ಡಾ.ಶ್ರೀಧರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.